ಮೃತ ಲೈನ್​ಮೆನ್​ ಕುಟುಂಬಕ್ಕೆ ಪರಿಹಾರದ ಚೆಕ್​ ವಿತರಣೆ

Site inspection with officials, steps taken to beautify Taj Bawadi memorial
The Eightfold Path of Donation and Puja Festival
Published on

ವಿಜಯಪುರ : ಕರ್ತವ್ಯದ ವೇಳೆ ವಿದ್ಯುತ್​ ಅಪಘಾತದಲ್ಲಿ ಮೃತಪಟ್ಟ ಲೈನ್​ಮೆನ್​ ಸುರೇಶ ಗೆಣ್ಣೂರ ಅವರ ಕುಟುಂಬಕ್ಕೆ ಹೆಸ್ಕಾಂ ಅಧ್ಯ ಸೈಯದ್​ ಅಜೀಮ್​ಪೀರ್​ ಖಾದ್ರಿ ಪರಿಹಾರದ ಚೆಕ್​ನ್ನು ನೀಡಿದರು. ಸುರೇಶ್​ ಬಸವನಬಾಗೇವಾಡಿ ಹೆಸ್ಕಾಂ ವಿಭಾಗದಲ್ಲಿ ಲೈನ್​ಮೆನ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು 2024 ಮಾ. 31 ರಂದು ವಿದ್ಯುತ್​ ಅಪಘಾತದಲ್ಲಿ ಮರಣ ಹೊಂದಿದ್ದರು.

ಈ ಹಿನ್ನೆಲೆ ಅವರ ಕುಟುಂಬಕ್ಕೆ ಹೆಸ್ಕಾಂ ವತಿಯಿಂದ ನೀಡಲಾಗುವ ಎಫ್​ಬಿಎಫ್​ ಹಣ 2 ಲ ಹಾಗೂ ಮರಣ ಉಪದಾನ ಮೊತ್ತ 12,53,700 ರೂ. ಗಳ ಚೆಕ್​ನ್ನು ಮೃತರ ಪತ್ನಿ ರೇಣುಕಾ ಅವರಿಗೆ ಶುಕ್ರವಾರ ಹಸ್ತಾಂತರಿಸಿದರು. ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ವೈಶಾಲಿ ಎಂ.ಎಲ್​., ಅಧೀಕ ಇಂಜನಿಯರ್​ ಸಿದ್ದಪ್ಪ ಬಿಂಜಗೇರಿ, ಹೆಸ್ಕಾಂ ಉಪ ಲೆಕ್ಕ ನಿಯಂತ್ರಣಾಧಿಕಾರಿ ಬಿ.ಕೆ. ಉಳ್ಳಾಗಡ್ಡಿ ಮತ್ತಿತರರಿದ್ದರು.

ಕರ್ತವ್ಯದ ವೇಳೆ ಮೃತ ಪಟ್ಟ ಲೈನ್​ಮೆನ್​ ಸುರೇಶ ಗೆಣ್ಣೂರ ಕುಟುಂಬಕ್ಕೆ ಹೆಸ್ಕಾಂ ಅಧ್ಯ ಸೈಯದ್​ ಅಜೀಮ್​ಪೀರ್​ ಖಾದ್ರಿ ಪರಿಹಾರದ ಚೆಕ್​ನ್ನು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net