ಕಡಲ್ಕೊರೆತದಿಂದಾದ ಹಾನಿಗೆ ಪರಿಹಾರ ಕೊಡಿ

harikantra
Published on

ಅಂಕೋಲಾ: ಇತ್ತೀಚೆಗೆ ತಾಲೂಕಿನ ಹಾರವಾಡದ ತರಂಗಮೇಟನಲ್ಲಿ ಕಡಲ್ಕೊರೆತದಿಂದ ಆಗಿರುವ ಆಸ್ತಿ-ಪಾಸ್ತಿ ಹಾನಿ ಕುರಿತು ಪರಿಹಾರ ಸೂಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂಕೋಲಾ ಮೀನುಗಾರರ ರಕ್ಷಣಾ ವೇದಿಕೆ ಪತ್ರ ಮೂಲಕ ಮನವಿ ಸಲ್ಲಿಸಿದೆ. ಈ ಕುರಿತು ಸಂಘಟನೆ ಜಿಲ್ಲಾಧ್ಯಕ್ಷ ಹರಿಹರ ವಿ. ಹರಿಕಾಂತ ಹಿಲ್ಲೂರು ಪತ್ರದಲ್ಲಿ ಉಲ್ಲೇಖಿಸಿದಂತೆ 50 ವರ್ಷಗಳಿಂದ ವಾಸವಾಗಿದ್ದ ಮನೆಗಳು ಸಮುದ್ರದ ಪ್ರಕ್ಷುಬ್ಧ ವಾತಾವರಣ ಹಾಗೂ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಇಂತಹ ಘಟನೆಗಳು ಪ್ರತಿವರ್ಷ ನಡೆಯುತ್ತಿದ್ದು, ಈ ಭಾಗಕ್ಕೆ ಶಾಶ್ವತ ತಡೆಗೋಡೆ ಅವಶ್ಯಕತೆ ಇದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಆಸ್ತಿ-ಪಾಸ್ತಿ ನಷ್ಟವಾಗದಂತೆ ಕ್ರಮ ವಹಿಸಬೇಕು ಮತ್ತು ಮೀನುಗಾರರ ರಕ್ಷಣೆಗೆ ಮುಂದಾಗಬೇಕು ಎಂದು ಹರಿಹಂತ್ರ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net