ಹೊಂದಾಣಿಕೆ ಸುಖಿ ದಾಂಪತ್ಯದ ಗುಟ್ಟು

17 ron a
Published on

ರೋಣ: ಜೀವನದ ಮುಖ್ಯ ಘಟ್ಟ ದಾಂಪತ್ಯ ಜೀವನ. ಸತಿ-ಪತಿ ಹೊಂದಾಣಿಕೆಯಿಂದ ಜೀವನ ನಡೆಸಿದರೆ ಇಡೀ ಕುಟುಂಬವನ್ನು ಸಂತಸದಿಂದ ಇಡಲು ಸಾಧ್ಯವಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಭಾನುವಾರ ಪಟ್ಟಣದ ಹೊಸ ಸಂತೆ ಬಜಾರ್ ಆವರಣದಲ್ಲಿ ತಲಾಬಕಟ್ಟಾ ಮಕಾನ ಕಮಿಟಿ ಹಾಗೂ ಆಜಾದ್ ಯುವಕ ಸಂಘದ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಉದ್ಘಾಟಿಸಿ ಮಾತನಾಡಿ ಅವರು, ಅಜಾದ್ ಯುವಕ ಸಂಘ ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೆ ಸರ್ವ ಧರ್ಮವನ್ನು ಒಗ್ಗೂಡಿಸಿಕೊಂಡು ಸಾಮೂಹಿಕ ವಿವಾಹ ನಡೆಸುತ್ತಿದೆ.ನಿಮ್ಮ ಕಾರ್ಯಕ್ಕೆ ಪ್ರೋತ್ಸಾಹ ಸದಾ ಇದ್ದೇ ಇರುತ್ತದೆ. ಸಂಘಟನೆಯು ಹೆಚ್ಚಿನ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತ ಉತ್ತರೋತ್ತರವಾಗಿ ಬೆಳೆಯಲಿ ಎಂದು ಆಶಿಸಿದರು.

ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಮಾತನಾಡಿ, ಭಾರತೀಯರೆಲ್ಲರೂ ದೇಶದ ಅಭಿವೃದ್ಧಿಗಾಗಿ ಶ್ರಮಿಸೋಣ. ದೇಶದ ಅಭಿವೃದ್ಧಿಗೆ ಎಲ್ಲ ಧರ್ಮಗಳ ಕೊಡುಗೆ ಅಪಾರವಾಗಿದೆ. ಹೆಣ್ಣಿಗೆ ಶಿಕ್ಷಣ ನೀಡಿದರೆ ಇಡೀ ಮನೆಗೆ ಬೆಳಕಾಗಿರುತ್ತಾಳೆ. ಶೈಕ್ಷಣಿಕ ಅಭಿವೃದ್ಧಿ ದೇಶದಲ್ಲಿ ಆಗಬೇಕಿದೆ ಎಂದು ಸಲಹೆ ನೀಡಿದರು.

ಹಜರತ್ ಸೈಯದ್ ನಿಜಾಮುದ್ದೀನ್ ಷಾ ಅರ್ಷರಫಿ, ಮಣಕವಾಡ ಹಿರೇವಡ್ಡಟ್ಟಿಯ ಅಭಿನವ ಮೃತ್ಯುಂಜಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಹಜರತ್ ಸೈಯದ್ ಸುಲೇಮಾನ ಶಾವಲಿ ಅಜ್ಜನವರು, ಎಸ್.ಎ. ಕಬೀರ, ಮಿಥುನ್ ಜಿ. ಪಾಟೀಲ, ವಿ.ಬಿ. ಸೋಮನಕಟ್ಟಿಮಠ, ಯೂಸೂಫ್ ಇಟಗಿ, ಬಾವಾಸಾಬ್ ಬೆಟಗೇರಿ, ಬಸವರಾಜ ನವಲಗುಂದ, ರಂಗಮ್ಮ ಭಜಂತ್ರಿ, ಕೆ.ಬಿ. ಹರ್ಲಾಪುರ, ಗದಿಗೆಪ್ಪ ಕಿರೆಸೂರ, ರಜಿಬೇಗಂ ಕೊಟಬಾಗಿ, ಮೌನೇಶ ಹಾದಿಮನಿ, ಶಫೀಕ ಮೂಗನೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net