ಕುಟುಂಬ ಸಮ್ಮಿಲನದಲ್ಲಿ ಸದ್ವಿಚಾರ ಚರ್ಚೆ

kutumba
ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಜಿಪಂ ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಉದ್ಘಾಟಿಸಿದರು.
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ನಮ್ಮ ದೇಶದ ಭಾಷೆಗಳನ್ನು ಉಪಯೋಗಿಸಲು ಹಿಂಜರಿಯುತ್ತಿದ್ದೇವೆ. ವಿದೇಶಿ ಭಾಷೆ, ಸಂಸ್ಕೃತಿ ಮುಂತಾದವುಗಳನ್ನು ಅವಲಂಬಿಸುತ್ತಿದ್ದೇವೆ. ದೊರಕಿದ ಸ್ವಾತಂತ್ರೃವನ್ನು ನಾವು ದುರುಪಯೋಗಪಡಿಸಿಕೊಳ್ಳುತ್ತಿದ್ದೇವೆ. ಸದ್ವಿಚಾರಗಳು ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ನಡೆಯುತ್ತದೆ ಎಂದು ಕುಂದಾಪುರದ ಆಪ್ತ ಸಮಾಲೋಚಕಿ ಸ್ವರ್ಣ ಹೇಳಿದರು.

ಭಾನುವಾರ ನಾಲ್ಕೂರು ನೇತಾಜಿ ಸೇವಾ ವೇದಿಕೆ, ಕೊಕ್ಕರ್ಣೆ ರೋಟರಿ ಕ್ಲಬ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ಕುಟುಂಬ ಸಮ್ಮಿಲನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಜಿಪಂ ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಕಾರ್ಯಕ್ರಮ ಉದ್ಘಾಟಿಸಿದರು. ಆರೂರು ತಿಮ್ಮಪ್ಪ ಶೆಟ್ಟಿ, ಸಿವಿಲ್ ಇಂಜಿನಿಯರ್ ಗುರುರಾಜ್ ಬಿ.ಎಂ.ಕೋಟೇಶ್ವರ, ನಿವೃತ್ತ ಮುಖ್ಯಶಿಕ್ಷಕ ವಾಸುದೇವ ಮಾಸ್ಟರ್ ಪರ್ಕಳ, ರೋಟರಿ ಕ್ಲಬ್ ಅಧ್ಯಕ್ಷ ಕಾಶೀನಾಥ್ ಶೆಣೈ ಕಜ್ಕೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಎನ್. ಕರುಣಾಕರ ಶೆಟ್ಟಿ ಕಜ್ಕೆ, ನೇತಾಜಿ ಸೇವಾ ವೇದಿಕೆ ಅಧ್ಯಕ್ಷ ನಾಗೇಂದ್ರ ಆಚಾರ್ಯ ಮಾರಾಳಿ, ಉದ್ಯಮಿ ಸಂತೋಷ್ ಹೆಗ್ಡೆ ಮಾರಾಳಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಗಣೇಶ್ ಮತ್ತಿತರರು ಇದ್ದರು. ಪ್ರಸಾದ್ ಹೆಗ್ಡೆ ಮಾರಾಳಿ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ವಿಶ್ವನಾಥ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net