ಹೋಲಿಕೆ ಸಂತೋಷದ ಕಳ್ಳತನ

Comparison is the theft of happiness
ನಾಲತವಾಡದ ಹಳ್ಳೂರ ಪ್ಯಾಲೇಸ್​ನಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಉದ್ಘಾಟಿಸಿದರು. ಗುರುಜಯಸಿದ್ಧೇಶ್ವರ ಶಿವಾಚಾರ್ಯರು, ವಿ.ಎಂ.ಹಾದಿಮನಿ, ಎಸ್​.ಎನ್​.ಕಂಗಳ, ಎಂ.ಎಸ್​.ಮೋಟಗಿ ಇದ್ದರು.
Published on

ನಾಲತವಾಡ: ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳವುದರಿಂದ ನಮ್ಮ ಸಂತೋಷ ಹಾಳಾಗುತ್ತದೆ ಎಂದು ಬೆಂಗಳೂರು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹೇಳಿದರು.

ಇಲ್ಲಿನ ಹಳ್ಳೂರ ಪ್ಯಾಲೇಸ್​ನಲ್ಲಿ ಭಾನುವಾರ ನಡೆದ 1999&2000 ನೇ ಬ್ಯಾಚಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೋಲಿಕೆ ಮಾಡುವುದು ನಿಲ್ಲಿಸಿ. ಅದರಿಂದ ನಿಮ್ಮ ಮೇಲೆ ನಿಮಗೆ ಬೇಸರ ಉಂಟಾಗಬಹುದು. ನಿಮ್ಮ ಸಾಮರ್ಥ್ಯಕ್ಕೆ ಅವರ ಸಾಮರ್ಥ್ಯ ಹೊಂದಿಕೆಯಾಗಬೇಕೆಂದೇನು ಇಲ್ಲ ಎಂದರು.

ಎಲ್ಲರೂ ಎಲ್ಲ್ಲ ವಿಷಯದಲ್ಲೂ ಜಾಣರಾಗಿರಬೇಕಿಲ್ಲ. ದೇವರು ನಮಗೆ ನೀಡಿದ ಬುದ್ಧಿವಂತಿಕೆ ಹೇಗೆ ಉಪಯೋಗಿಸಿಕೊಳ್ಳಬೇಕು ಎಂದು ಯೋಚಿಸಬೇಕು. ಮತ್ತೊಬ್ಬರ ಜತೆ ಹೋಲಿಸಿಕೊಂಡಾಗ ಅಹಂಕಾರ ಅಥವಾ ಕೀಳರಿಮೆ ಉಂಟಾಗುತ್ತದೆ ಎಂದು ಸಲಹೆ ನೀಡಿದರು.

ಹಿರೂರು ಅನ್ನದಾನೇಶ್ವರ ಸಂಸ್ಥಾನಮಠದ ಶ್ರೀ ಗುರುಜಯಸಿದ್ಧೇಶ್ವರ ಶಿವಾಚಾರ್ಯರು ಸಾನ್ನಿಧ್ಯವಹಿಸಿದ್ದರು.

ವಿ.ಎಂ.ಹಾದಿಮನಿ, ಎಸ್​ಎನ್​ ಕಂಗಳ, ಎಂ.ಎಸ್​ ಮೋಟಗಿ, ಸಿ.ಎಚ್​ ದಳವಾಯಿ,ಎಲ್​.ಎಸ್​ ನಾಯಕ್​, ದೊಡಮನಿ, ಎನ್​.ಸಿ.ಗಡೇದ, ಬಿ.ಐ. ಸಜ್ಜನ,ಬಿ.ಜಿ.ಕಡಿ, ಎಚ್​.ಎಂ.ವಡಗೇರಿ ಉಪಸ್ಥಿತರಿದ್ದರು.

ವೀರೇಶ ನವಲಿ,ಹೀರು ನಾಯಕ, ದೀಾ ಸಂಗಮೇಶ ಪಾಟೀಲ, ಖುಷಿ ಪರಸಪ್ಪ ಭೋವಿ ಭರತ ನಾಟ್ಯ ಪ್ರದರ್ಶಿಸಿದರು. ಅಂಜನಾ ಕುಲಕರ್ಣಿ, ಶೀಲಾ ಇಳಕಲ್ಲ ಪ್ರಾರ್ಥಿಸಿದರು. ಆದಪ್ಪ ಬಿರಾದಾರ ವಂದಿಸಿದರು. ಶರಣು ಹುಡೇದ, ನೀಲಗಂಗಮ್ಮ ಹಿರೇಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net