

ಕವಲೂರು: ದೇಹ ಹಾಗೂ ಮನಸ್ಸಿನ ಸಮ್ಮಿಲನವೇ ಯೋಗವಾಗಿದೆ ಎಂದು ಯೋಗಪಟು ರೇಷ್ಮಾ ವಡ್ಡಟ್ಟಿ ತಿಳಿಸಿದರು.
ಗ್ರಾಮದಲ್ಲಿ ಜಿಲ್ಲಾ ಆಯುಷ್ ಇಲಾಖೆ ಕೊಪ್ಪಳ, ಗ್ರಾಪಂ ಕವಲೂರು ವತಿಯಿಂದ ನರೇಗಾ ಕಾಮಗಾರಿ ಸ್ಥಳದಲ್ಲಿ ಯೋಗ ಹಾಗೂ ಧ್ಯಾನದ ಬಗ್ಗೆ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಬುಧವಾರ ಮಾತನಾಡಿದರು.
ಉಸಿರಾಟ, ಭಾವನೆಗಳ ಹತೋಟಿ, ಸದೃಢ ದೇಹಹೊಂದುವ ಕ್ರಿಯೆಯೇ ಯೋಗವಾಗಿದೆ. ಮಾನವ ಯೋಗದ ಜೊತೆಗೆ ಸಮುದಾಯದ ಜೊತೆಗೆ ಉತ್ತಮ ಒಡನಾಟವನ್ನು ಇಟ್ಟುಕೊಳ್ಳಬೇಕು ಇದರಿಂದ ಮನಸ್ಸಿನಲ್ಲಿ ತೃಪ್ತಿ ಭಾವನೆ ಮೂಡಲಿದೆ ಎಂದರು.
ಯೋಗಪಟು ವೀರಯ್ಯ ಒಂಟಿಗೋಡಿಮಠ ಮಾತನಾಡಿ, ಯೋಗದಿಂದ ಆರೋಗ್ಯ ವೃದ್ಧಿಯಾಗಲಿದೆ. ಯೋಗವನ್ನು ಜೀವನದಲ್ಲಿ ಪ್ರತಿನಿತ್ಯದ ಅಭ್ಯಾಸವಾಗಿ ರೂಢಿಸಿಕೊಳ್ಳಬೇಕು ಹಾಗೂ ಯೋಗ ಮಾನಸಿಕ ನೆಮ್ಮದಿ ಜತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಲಿದೆ ಎಂದರು.