ಸಂಧ್ಯಾರಾಣಿಗೆ ಸಮಾಜಸೇವಾ ಪುರಸ್ಕಾರ

13spt2
ಸೋಮವಾರಪೇಟೆ ಇನ್ನರ್‌ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಅಧ್ಯಕ್ಷೆ ಬಿ.ಕೆ.ಸಂಧ್ಯಾರಾಣಿ ಅವರು ಮೈಸೂರಿನ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯಿಂದ ಕೊಡಮಾಡುವ ಸಮಾಜಸೇವೆ ಕ್ಷೇತ್ರದ ಪುರಸ್ಕಾರಕ್ಕೆ ಭಾಜನರಾಗಿ ಪ್ರಶಸ್ತಿ ಪಡೆದುಕೊಂಡರು. ಯೋಗಣ್ಣ, ಮಂಜೇಗೌಡ, ಯಮುನಾ, ರಾಜು, ಸತೀಶ್ ಇದ್ದರು.
Published on

ಸೋಮವಾರಪೇಟೆ: ಮೈಸೂರಿನ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯಿಂದ ದಿ.ಕೆ.ಎಚ್.ರಾಮಯ್ಯ ಜ್ಞಾಪಕಾರ್ಥ ಕೊಡಮಾಡುವ ಸಮಾಜಸೇವೆ ಕ್ಷೇತ್ರದ ಪುರಸ್ಕಾರಕ್ಕೆ ಇನ್ನರ್‌ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಅಧ್ಯಕ್ಷೆ ಬಿ.ಕೆ.ಸಂಧ್ಯಾರಾಣಿ ಭಾಜನರಾಗಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥ ಎಸ್.ಪಿ.ಯೋಗಣ್ಣ ಪ್ರಶಸ್ತಿ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ. ಮಂಜೇಗೌಡ, ವಿಕಾಸ ವೇದಿಕೆ ಅಧ್ಯಕ್ಷೆ ಯಮುನಾ, ಗೌರವಾಧ್ಯಕ್ಷ ಎಚ್.ಕೆ.ರಾಜು, ಸಮಾಜಸೇವಕ ಟಿ.ಸತೀಶ್ ಜವರೇಗೌಡ, ಶ್ರೀರಂಗಪಟ್ಟಣ ಎಪಿಎಂಸಿ ಸದಸ್ಯ ಎಂ.ನಂದೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net