

ದೊಡ್ಡಬಳ್ಳಾಪುರ ಗ್ರಾಮಾಂತರ: ಯುವ ಸಮುದಾಯವನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್‌ನಾಯಕ್ ಹೇಳಿದರು.
ತಾಲೂಕಿನ ಕಾಡನೂರು ಗ್ರಾಮದ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಏರ್ಪಡಿಸಿದ್ದ ವಿಶೇಷ ಭಜನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮುದಾಯದ ಭಾಗಿತ್ವದಲ್ಲಿ ಗ್ರಾಮೀಣ ಅಭಿವೃದ್ಧಿ ಮಾಡಬಹುದು. ಹಿರಿಯರು ಗ್ರಾಮಗಳ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಪಕ್ಷ, ಜಾತಿ, ಧರ್ಮ ಮೀರಿ ಜನರು ನಮ್ಮೂರಿನ ಕೆಲಸ, ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸಂಸ್ಥೆ ಯೋಜನೆಯನ್ನು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಚನ್ನಕೇಶವಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಗೋಪಾಲಯ್ಯ ಮಾತನಾಡಿ, ತಾಲೂಕಿನ ಹಲವಾರು ಐತಿಹಾಸಿಕ ದೇವಾಲಯಗಳನ್ನು ಧರ್ಮಸ್ಥಳ ದೇವಾಲಯ ಜೀರ್ಣೋದ್ಧಾರ ಯೋಜನೆಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಸಹಕಾರಿ. ಸ್ವಹಾಯ ಸಂಘಗಳ ಕಾರ್ಯವೈಖರಿ ಹಾಗೂ ಯೋಜನೆಗಳಿಂದ ರಾಜ್ಯದ ಹಲವೆಡೆ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು.
ಚನ್ನಕೇಶವಸ್ವಾಮಿ ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ವೆಂಕಟೇಗೌಡ, ಮಾಜಿ ಕಾರ್ಯದರ್ಶಿ ಕೆ.ಜಿ.ನಾರಾಯಣಗೌಡ, ಮಾಜಿ ಖಜಾಂಚಿ ಕೆ.ಸಿ.ನಾರಾಯಣಸ್ವಾಮಿ, ನಿವೃತ್ತ ಮುಖ್ಯಶಿಕ್ಷಕ ವೀರೇಗೌಡ, ಮುಖಂಡರಾ ಸಿ.ಎ.ರಮೇಶ್, ಎಸ್.ಕೋದಂಡಮೂರ್ತಿ, ಎಂ.ಸಿ.ಕೆ.ಮೂರ್ತಿ ಇದ್ದರು.
ಬೆಂಗಳೂರಿನ ಸದ್ಗುರು ಭಜನಾ ಮಂಡಳಿ, ಶನೈೀಶ್ವರಸ್ವಾಮಿ, ಜೈ ಮಾರುತಿ, ಮತ್ತು ಕಾಡನೂರು ಚನ್ನಕೇಶವಸ್ವಾಮಿ ಭಜನಾ ಮಂಡಳಿ ಕಲಾವಿದವರು ಭಜನೆ ಮಾಡಿದರು.