ಸಮುದಾಯ ಭವನ ದುರಸ್ತಿ ಮಾಡಿಸಿ

22.ktal.01
Published on

ಕವಿತಾಳ: ಪಟ್ಟಣದ 6ನೇ ವಾರ್ಡ್‌ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನವನ್ನು ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಪಪಂ ಮುಖ್ಯಾಧಿಕಾರಿ ರವಿ ರಂಗಸುಭೆಗೆ ಭೀಮ್ ಆರ್ಮಿ ಸಂಘಟನೆಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.

ಸಂಘಟನೆಯ ಹೋಬಳಿ ಘಟಕದ ಅಧ್ಯಕ್ಷ ಅಜ್ಜಪ್ಪ ಬುಳ್ಳಾಪುರ ಮತನಾಡಿ, ಸಮುದಾಯ ಭವನದ ಗೋಡೆಗಳು ಬಿರುಕು ಬಿಟ್ಟಿದ್ದು, ಛಾವಣಿಗಳ ಸಿಮೆಂಟ್ ಕಳಚಿ ಬೀಳುತ್ತಿವೆ. ಇದರಿಂದಾಗಿ ಭವನದಲ್ಲಿ ಕಾರ್ಯಕ್ರಮ ನಡೆಸಲು ಭಯವಾಗುತ್ತದೆ. ಸಮುದಾಯ ಭವನಕ್ಕೆ ಕಾಂಪೌಂಡ್ ನಿರ್ಮಿಸಬೇಕು ಹಾಗೂ ಕೊಳವೆಬಾವಿ ಕೊರೆಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net