

ಬೆಳಗಾವಿ: ಸರ್ಕಾರವು ಸಮುದಾಯ ಒಡೆಯುವ ಕೆಲಸ ಮಾಡಿದೆ. ಕರ್ನಾಟಕದಲ್ಲಿ ಬೃಹತ್ ಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತರು ಅಲ್ಪಸಂಖ್ಯಾತರಾಗುವುದರಲ್ಲಿ ಸಂದೇಹವಿಲ್ಲ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯ, ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಉಪಾಧ್ಯ ಡಾ.ಪ್ರಭಾಕರ ಕೋರೆ ಕಳವಳ ವ್ಯಕ್ತಪಡಿಸಿದರು.
ನಗರದ ಜೆಎನ್ಎಂಸಿ ಡಾ.ಬಿ.ಎಸ್.ಜೀರಗೆ ಸಭಾಂಗಣದಲ್ಲಿ ಮಹಾಸಭೆಯ ವಧು&ವರ ಅನ್ವೇಷಣ ಕೇಂದ್ರವು ಸೋಮವಾರ ಆಯೋಜಿಸಿದ್ದ 61ನೇ ವಧು&ವರರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಲಿಂಗಾಯತ ಸಮುದಾಯವು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಪ್ರಬಲವಾಗಬೇಕಾದರೆ ಒಳಪಂಗಡ ತೊರೆದು ವೀರಶೈವ ಲಿಂಗಾಯತ ಸಮುದಾಯ ಒಂದೇ ಎಂದು ತಿಳಿದರೆ ಮಾತ್ರ ಸಂಟನೆ ಸಾಧ್ಯ. ಪ್ರಸ್ತುತ ವೀರಶೈವ ಲಿಂಗಾಯತ ಸಮಾಜದಲ್ಲಿ ಅನೇಕ ಒಳಪಂಗಡಗಳಿಂದ ಸಮುದಾಯ ಒಡೆಯುತ್ತಿದೆ. ಒಳಪಂಗಡ ಬಿಟ್ಟು ವೈವಾಹಿಕ ಸಂಬಂಧ ಬೆಸೆದರೆ ಬೃಹತ್ ಸಮುದಾಯವು ಸಂಟನೆಗೊಳ್ಳಲು ಸಾಧ್ಯ ಎಂದರು.
ಶ್ರೀ ಬೆಂಗಳೂರಿನಲ್ಲಿ ಕೇಂದ್ರ
ಒಂದೇ ವೇದಿಕೆಯ ಮೇಲೆ ತಮ್ಮ ಜೀವನ ಸಂಗಾತಿ ತಮ್ಮ ಪಾಲಕರ ಸಹಾಯದಿಂದ ಸ್ವತ@ ಆಯ್ಕೆ ಮಾಡಿಕೊಳ್ಳುವ ಸದುದ್ದೇಶದಿಂದ ವೀರಶೈವ ಲಿಂಗಾಯತ ವಧು&ವರ ಅನ್ವೇಷಣ ಕೇಂದ್ರವು ಕೆಎಲ್ಇ ಸಂಸ್ಥೆಯೊಂದಿಗೆ 1988ರಿಂದ ಕಾರ್ಯ ನಿರ್ವಹಿಸುತ್ತಿದೆ. ಒಂದಿಲ್ಲೊಂದು ಕೆಲಸದಲ್ಲಿ ನಿರತರಾಗಿರುವ ಲಿಂಗಾಯತ ಸಮುದಾಯದ ಒಳಪಂಗಡಗಳ ವಧು&ವರರಿಗೆ, ಪಾಲಕರಿಗೆ ಬೇರೆ, ಬೇರೆ ಊರುಗಳಿಗೆ ಹೋಗಿ ವಧು&ವರರನ್ನು ಭೇಟಿ ಮಾಡುವುದು ಕಷ್ಟವಾಗುತ್ತಿರುವುದರಿಂದ ಇಂತಹ ಸಮಾವೇಶಗಳನ್ನು ಮಹಾಸಭೆ ಏರ್ಪಡಿಸುತ್ತಿದೆ. ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ವಧು&ವರ ಅನ್ವೇಷಣ ಕೇಂದ್ರವನ್ನು ಮಹಾಸಭೆಯು ಪ್ರಾರಂಭಿಸಲಿದ್ದು ಎನ್ಆರ್ಐಗೆ ಅನುಕೂಲ ಮಾಡಿಕೊಡಲಿದೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಟಕದ ಅಧ್ಯೆ ರತ್ನಪ್ರಭಾ ಬೆಲ್ಲದ, ವಧುವರ ಅನ್ವೇಷಣ ಕೇಂದ್ರದ ಅಧ್ಯ ಡಾ.ಎಫ್.ವಿ.ಮಾನ್ವಿ, ಕಾರ್ಯದರ್ಶಿ ಡಾ.ಗುರುದೇವಿ ಹುಲೆಪ್ಪನವರಮಠ ಮಾತನಾಡಿದರು. ಪ್ರಕಾಶ ಬಾಳೇಕುಂದ್ರಿ, ಜ್ಯೋತಿ ಬದಾಮಿ, ವೇದಿಕೆಯಲ್ಲಿದ್ದರು. ಆಶಾ ಯಮಕನಮರಡಿ ಪ್ರಾರ್ಥಿಸಿದರು. ಡಾ.ಭಾರತಿ ಮಠದ, ಪ್ರೊ.ನೇರ್ಲಿ ನಿರೂಪಿಸಿದರು.