ಸಂಘಟನೆಯಿಂದ ಸಮುದಾಯದ ಅಭಿವೃದ್ಧಿ

sri-1 (6)
Published on

ಶೃಂಗೇರಿ: ಸಂಘಟನೆಯಿಂದ ಸಮುದಾಯದ ಅಭಿವೃದ್ಧಿಯಾಗುತ್ತದೆ ಎಂದು ಕುಂಬಾರ ಯುವ ವೇದಿಕೆ ಅಧ್ಯಕ್ಷ ಮೆಣಸೆ ಚಂದ್ರಶೇಖರ್ ಹೇಳಿದರು.

ಮೆಣಸೆ ಗ್ರಾಮ ಪಂಚಾಯಿತಿಯ ಕಲ್ಕಟ್ಟೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕುಂಬಾರ ಯುವ ವೇದಿಕೆ ಏರ್ಪಡಿಸಿದ್ದ ಶ್ರೀ ಮಹಾಗಣಪತಿ ಹೋಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಮುದಾಯವು ಈಗ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದು, ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವುದರಿಂದ ಸಮಾಜದಲ್ಲಿ ಸಾಧನೆ ಮಾಡಬಹುದಾಗಿದೆ ಎಂದರು.

ಕುಂಬಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ್ ಮಾತನಾಡಿ, ತಾಲೂಕು ಕೇಂದ್ರದಲ್ಲಿ ನಮ್ಮ ಸಮುದಾಯವನ್ನು ಸಂಘಟಿಸುವ ಮೂಲಕ ಸಂಘಕ್ಕೆ ಶಕ್ತಿ ತುಂಬಲಾಗಿದೆ. ಸಂಘಟಿತರಾಗಿದ್ದರೆ ನಮಗೆ ಹೆಚ್ಚಿನ ಶಕ್ತಿ ಬರುತ್ತದೆ. ಮಹಿಳೆಯರು ಸ್ವ ಉದ್ಯೋಗಕ್ಕೆ ಮಹತ್ವ ನೀಡಿ, ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಶ್ರೀಮಹಾಗಣಪತಿ ಹೋಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈಶ್ವರ್ ನರಸಿಪುರ, ಭೋಜುಕುಲಾಲ್, ದಿಲೀಪ್, ಶರತ್, ಉದಯ್, ಮಂಜು, ಲಲಿತರವೀಂದ್ರ, ಹರೀಶ್ ಮೂಡಿಗೆರೆ, ಬಾಬು ಮೂಲ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net