ಸಮುದಾಯ ಭವನ ಅಭಿವೃದ್ಧಿಗೊಳಿಸಿ

19 KAMPLI 01
ಕಂಪ್ಲಿಯಲ್ಲಿ ದ್ಯಾವಮ್ಮ ಮತ್ತು ದುರುಗಮ್ಮ ದೇವಿ ಮೂರ್ತಿ ಮೆರವಣಿಗೆ ನಡೆಯಿತು. ಪ್ರಮುಖರಾದ ಬಿ.ವೀರಭದ್ರಪ್ಪ, ಯು.ವಿರುಪಣ್ಣ, ಬಿ.ಸಿದ್ದಪ್ಪ, ಎಲಿಗಾರ ನಾಗರಾಜ, ಜೆ.ಈರಪ್ಪ ಇತರರಿದ್ದರು.
Published on

ಕಂಪ್ಲಿ: ಗಂಗಾನಗರದ ದ್ಯಾವಮ್ಮ ಮತ್ತು ದುರುಗಮ್ಮ ಸಮುದಾಯ ಭವನ ಅಭಿವೃದ್ಧಿಗೊಳಿಸುವಲ್ಲಿ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದಪ್ಪ ಒತ್ತಾಯಿಸಿದರು.

ಪಟ್ಟಣದ ದ್ಯಾವಮ್ಮ ಮತ್ತು ದುರುಗಮ್ಮ ದೇವಿಯರ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಗಂಗಾಮತಸ್ಥರ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗಾಗಿ ಸಮುದಾಯ ಭವನ ಅಭಿವೃದ್ಧಿಗೊಳಿಸುವಲ್ಲಿ ಸದ್ಭಕ್ತರೊಂದಿಗೆ ಜನಪ್ರತಿನಿಧಿಗಳು ಕೈಜೋಡಿಸಬೇಕು ಎಂದರು.

ಯು.ವೆಂಕೋಬಿ ನೇತೃತ್ವದ ಭಜನಾ ವೃಂದ ಹಾಗೂ ಇತರ ಜನಪದ ಕಲಾವಿದರು, ಪ್ರಮುಖರಾದ ಬಿ.ವೀರಭದ್ರಪ್ಪ, ಯು.ವಿರುಪಣ್ಣ, ಎಲಿಗಾರ ನಾಗರಾಜ, ಜೆ.ಈರಪ್ಪ, ಯು.ರಮೇಶ, ಕರೇಕಲ್ ಮನೋಹರ, ಬಿ.ಈರಪ್ಪ, ಲಬೇದಗುರು, ಎಸ್.ಸುರೇಶ, ಬಿ.ರಮೇಶ, ಯು.ಹನುಮಂತಪ್ಪ, ಅರವಿಂದ, ಬೆಂಕೆಪ್ಪ, ಅಯ್ಯೋದಿ ವೆಂಕಟೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net