ಸಮುದಾಯದ ಸಾಧಕರೇ ಈಡಿಗರಿಗೆ ಸ್ಫೂರ್ತಿ

22 07 2025_BGR_RURAL-PAGE_3
ದೊಡ್ಡಬಳ್ಳಾಪುರದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗ ಯುವ ಸಂದಿಂದ ಹಮ್ಮಿಕೊಂಡಿದ್ದ ಸಂದ ದಶಮಾನೋತ್ಸವದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಮಾಜಿ ಶಾಸಕ ಕುಮಾರ್​ ಬಂಗಾರಪ್ಪ, ಸಂದ ಅಧ್ಯಕ್ಷ ಕೆ.ಜಿ.ಶ್ರೀನಿವಾಸ ಮೂರ್ತಿ, ಗೌ.ಅಧ್ಯಕ್ಷ ಎನ್​.ಸುನೀಲ್​ ಕುಮಾರ್​, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂದ ಅಧ್ಯಕ್ಷ ಡಾ.ಎಂ.ತಿಮೇಗೌಡ, ಉಪಾಧ್ಯಕ್ಷರಾದ ಜೆ.ರಾಜೇಂದ್ರ, ಟಿ.ಶಿವಕುಮಾರ್​, ಜಂಟಿ ಕಾರ್ಯದರ್ಶಿ ಪ್ರಕಾಶ್​, ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಜಿಪಂ ಮಾಜಿ ಸದಸ್ಯ ಎನ್​.ಅರವಿಂದ್​ ಇದ್ದರು.
Published on

ದೊಡ್ಡಬಳ್ಳಾಪುರ : ಈಡಿಗ ಸಮುದಾಯದಲ್ಲಿ ಉನ್ನತ ಸ್ಥಾನಕ್ಕೇರಿದ ಮಹನೀಯರು ನಮಗೆ ಸ್ಫೂರ್ತಿಯಾಗಬೇಕು. ಸಮುದಾಯ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯಲು ಪೂರಕವಾದ ವೇದಿಕೆ ಕಲ್ಪಿಸುವ ಮೂಲಕ ಸಮಾಜಕ್ಕೆ ಶಕ್ತಿ ನೀಡಬೇಕಿದೆ ಎಂದು ಮಾಜಿ ಸಚಿವ, ನಟ ಕುಮಾರ್​ ಬಂಗಾರಪ್ಪ ಹೇಳಿದರು.

ನಗರದ ಮಾಂಗಲ್ಯ ಕಲ್ಯಾಣ ಮಂದಿರದಲ್ಲಿ ಭಾನುವಾರ ಕರ್ನಾಟಕ ಪ್ರದೇಶ ಆರ್ಯ ಈಡಿಗ ಯುವ ಸಂದಿಂದ ಹಮ್ಮಿಕೊಂಡಿದ್ದ ಸಂದ ದಶಮಾನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಕಡಿಮೆ ಪ್ರಮಾಣದಲ್ಲಿರುವ ಈಡಿಗ ಸಮುದಾಯದ ಆರ್​.ಎಲ್​.ಜಾಲಪ್ಪ ಅವರನ್ನು ಗೆಲ್ಲಿಸಿ, ರಾಷ್ಟ್ರಮಟ್ಟದ ರಾಜಕಾರಣಕ್ಕೂ ಕಳಿಸಿರುವುದನ್ನು ಸ್ಮರಿಸಬೇಕಿದೆ. ಈಡಿಗ ಜನಾಂಗದ ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಗುರುಸ್ವಾಮಿ ಅಂತಹ ಮಹನೀಯರು ಮಾಡಿರುವ ಸೇವೆ ಸ್ಮರಿಸಬೇಕಿದೆ. ಜಾತಿ ರಾಜಕಾರಣ ಎಲ್ಲ ಕಡೆ ನಡೆಯುವುದಿಲ್ಲ. ನಮ್ಮ ಸೇವೆ, ಜನಾನುರಾಗಿ ಕಾರ್ಯಗಳು ನಮ್ಮನ್ನು ಗುರುತಿಸುವಂತೆ ಮಾಡುತ್ತವೆ ಎಂದರು.

ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತೆ ಎಸ್​.ಸುಮನಾ, ಸಮುದಾಯದ ಶಾಂತ ರಾಜ್​ಕುಮಾರ್​, ಕರ್ನಾಟಕ ಪ್ರದೇಶ ಆರ್ಯ ಈಡಿಗ ಯುವ ಸಂದ ಉಪಾಧ್ಯಕ್ಷ ನಾಗರಾಜ್​, ಪ್ರಧಾನ ಕಾರ್ಯದರ್ಶಿ ಎನ್​.ರವಿಕಿರಣ್​, ಖಜಾಂಚಿ ಜೆ.ಕುಮಾರ್​, ಜಂಟಿ ಕಾರ್ಯದರ್ಶಿ ಡಿ.ರು ಇತರರು ಇದ್ದರು. ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಶಿಕ್ಷಣ ಪರಿಕರ ವಿತರಿಸಲಾಯಿತು.

ಮಹಾಮಹಿಮರ ತತ್ವಾದರ್ಶ ಪಾಲಿಸಿ : ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, ಒಂದು ಸಮುದಾಯ ಮುಖ್ಯವಾಹಿನಿಗೆ ಬರಲು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಬೇಕಿದೆ. ಹಿಂದುಳಿದ ಈಡಿಗ ಸಮುದಾಯದ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ. ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು ಸಹ ಇದನ್ನೇ ಪ್ರತಿಪಾದಿಸಿದ್ದರು. ಸಮಾಜ ಸುಧಾರಕರಾಗಿ ಜಗತ್ತಿಗೆ ಉತ್ತಮ ಸಂದೇಶ ನೀಡಿದ ಅಂತಹ ಮಹಾಮಹಿಮರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದರು.

ಶಿಕ್ಷಣಕ್ಕೆ ಒತ್ತು ನೀಡಿ : ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು ಅವರ ಆಶಯದಂತೆ ಶಿಕ್ಷಣಕ್ಕೆ ಒತ್ತು ನೀಡಿದರೆ ಸಮಾಜ ಸುಧಾರಿಸುತ್ತದೆ. ಸದ್ಯ ಇಂಜಿನಿಯರಿಂಗ್​, ವೈದ್ಯಕಿಯ ಕ್ಷೇತ್ರದಲ್ಲಿ ಕಾಲೇಜು ಶುಲ್ಕಗಳು ಹೆಚ್ಚಾಗಿದ್ದು, ಆರ್ಥಿಕ ಸಂಕಷ್ಟದಿಂದ ಬಡ ಮಧ್ಯಮ, ವರ್ಗದವರಿಗೆ ಕಷ್ಟವಾಗುತ್ತಿದೆ. ಈ ದಿಸೆಯಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ ಕಾಲೇಜು ಶುಲ್ಕವನ್ನು ಭರಿಸಿ ಉತ್ತೇಜಿಸುವ ಕುರಿತು ಸದನದಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು. ಈಡಿಗ ಸಮುದಾಯಕ್ಕೆ ಜಮೀನು ಮಂಜೂರು ಮಾಡುವ ಕುರಿತು ಸರ್ಕಾರ ಸಂಪುಟ ಸಭೆಯಲ್ಲಿ ತೀರ್ಮಾನಿಸಬೇಕಿದ್ದು, ಈ ಬಗ್ಗೆ ಕ್ರಮ ವಹಿಸಲಾಗುವುದು. ಮಾಜಿ ಶಾಸಕರು ಸಹ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಶಾಸಕ ಧೀರಜ್​ ಮುನಿರಾಜು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net