ಎಲ್ಲರೊಂದಿಗೂ ಕನ್ನಡದಲ್ಲೇ ಸಂಹವನ ನಡೆಸಿ

1ark-6
ಅರಕಲಗೂಡು ತಾಲೂಕು ಕೊಣನೂರಿನ ಉಳ್ಳೇನಹಳ್ಳಿ ನಳಂದ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸಕಿನಾ, ಜಗದೀಶ್, ದಿಲೀಪ್ ಇತರರು ಇದ್ದರು.
Published on

ಅರಕಲಗೂಡು: ತಾಲೂಕಿನ ಕೊಣನೂರಿನ ಉಳ್ಳೇನಹಳ್ಳಿ ನಳಂದ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ 69ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಮುಖ್ಯ ಶಿಕ್ಷಕಿ ಸಕಿನಾ ಮಾತನಾಡಿ, ಕನ್ನಡ ಏಕೀಕರಣಕ್ಕೆ ಶ್ರಮಿಸಿದ ಮಹಾನ್ ವ್ಯಕ್ತಿಗಳಾದ ಆಲೂರು ವೆಂಕಟರಾಯರು ಹಾಗೂ ಇತರ ಮಹನೀಯರನ್ನು ಸ್ಮರಿಸಿಕೊಳ್ಳಬೇಕು. ಮುಖ್ಯವಾಗಿ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಲು ಪ್ರತಿದಿನ ಕನ್ನಡದಲ್ಲೇ ಮಾತನಾಡಬೇಕು ಎಂದು ಸಲಹೆ ನೀಡಿದರು.

ಸಹ ಶಿಕ್ಷಕರಾದ ಜಗದೀಶ್, ದಿಲೀಪ್, ದಿವ್ಯಾ, ಲತಾ, ಮಿಸ್ರಿಯಾ, ಅರ್ಪಿತಾ, ನಿಕತ್, ಅಮೀನಾ, ಕಲ್ಪನಾ, ಪುಷ್ಪಾವತಿ ಇತರರು ಇದ್ದರು. ಎಲ್ಲರಿಗೂ ಸಿಹಿ ಹಂಚಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net