ಶಿರಾಳಕೊಪ್ಪದಲ್ಲಿ ಕೋಮುಸಂಘರ್ಷ: ಎರಡು ಗುಂಪಿನ ಯುವಕರ ಮಧ್ಯೆ ಗಲಾಟೆ..

Shiralakoppa
Published on

ಶಿವಮೊಗ್ಗ: ಮೇಲಿಂದ ಮೇಲೆ ಕೋಮುಸಂಘರ್ಷದ ಕಾರಣಕ್ಕೆ ಸುದ್ದಿಯಾಗುತ್ತಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಕೋಮುಸಂಘರ್ಷ ಪ್ರಕರಣ ನಡೆದಿದೆ. ಎರಡು ಕೋಮುಗಳ ಗುಂಪಿನ ಯುವಕರ ಮಧ್ಯೆ ಗಲಾಟೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಈ ಪ್ರಕರಣ ನಡೆದಿದೆ. ಅದೂ ವಲಯಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಕ್ಷುಲ್ಲಕ ವಿಚಾರಕ್ಕೆ ಈ ಗಲಾಟೆ ನಡೆದಿದೆ. ಪರಿಣಾಮವಾಗಿ, ಶಿರಾಳಕೊಪ್ಪದಲ್ಲಿ ಏಕಾಏಕಿ ಬಿಗುವಿನ ವಾತವರಣ ನಿರ್ಮಾಣವಾಗಿದ್ದು, ಅಂಗಡಿ-ಮುಂಗಟ್ಟುಗಳೂ ಬಂದ್ ಆಗಿವೆ. ಎರಡು ಕೋಮುಗಳ ನಡುವೆ ಗಲಾಟೆ ಉಂಟಾದ ಹಿನ್ನೆಲೆಯಲ್ಲಿ ಶಿರಾಳಕೊಪ್ಪದ ಅಂಗಡಿ-ಮುಂಗಟ್ಟುಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ.

ವಲಯಮಟ್ಟದ ಕ್ರೀಡಾಕೂಟದಲ್ಲಿ ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿತ್ತು. ಗಲಾಟೆ ಅಂತ್ಯಗೊಂಡು ಎಲ್ಲರೂ ಅಲ್ಲಿಂದ ಹೋಗುವ ವೇಳೆ ಗುಂಪುಗಳ ನಡುವೆ ಮತ್ತೆ ಮಾರಾಮಾರಿ ನಡೆದಿದೆ. ಶಿರಾಳಕೊಪ್ಪ ಬಸ್ ನಿಲ್ದಾಣದ ಬಳಿಯೇ ಎರಡು ಕೋಮಿನ ಯುವಕರ ನಡುವೆ ಗಲಾಟೆ ನಡೆದಿದ್ದು, ಗಾಯಾಳುಗಳನ್ನು ಶಿರಾಳಕೊಪ್ಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಇಗದೆ. ಮುಂಜಾಗ್ರತಾ ಕ್ರಮವಾಗಿ ಶಿರಾಳಕೊಪ್ಪ ಪಟ್ಟಣ ಸಂಪೂರ್ಣ ಬಂದ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net