ಕಾಮನ್ ವೆಲ್ತ್ ಸಂಸದೀಯ ಸಮ್ಮೇಳನ, ಭಾರತ ಸಂಸದರ ನಿಯೋಗದೊಂದಿಗೆ ಪ್ರಮುಖ ಚರ್ಚೆ

IMG_20251010_231155.jpg
Published on

ಚಿಕ್ಕಬಳ್ಳಾಪುರ: ಬಾರ್ಬಡೋಸ್‌ನ ಬ್ರಿಡ್ಜ್‌ ಟೌನ್‌ನಲ್ಲಿ ನಡೆದ 68 ನೇ ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನದಲ್ಲಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭೆಯ ಉಪಸಭಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ನೇತೃತ್ವದ ಭಾರತೀಯ ಸಂಸದೀಯ ನಿಯೋಗದ ತಂಡದೊಂದಿಗೆ ಚಿಕ್ಕಬಳ್ಳಾಪುರದ ಸಂಸದ ಡಾ.ಕೆ.ಸುಧಾಕರ್ ಭಾಗವಹಿಸಿದ್ದರು.
ಕಾಮನ್‌ ವೆಲ್ತ್ ಸಂಸದೀಯ ಸಂಘದ ಸಹಯೋಗದೊಂದಿಗೆ ಬಾರ್ಬಡೋಸ್ ಸಂಸತ್ತು ಕೈಗೊಂಡಿದ್ದ ಸಮ್ಮೇಳನದಲ್ಲಿ 180 ಕ್ಕೂ ಹೆಚ್ಚು ಕಾಮನ್‌ವೆಲ್ತ್ ದೇಶಗಳ ಸ್ಪೀಕರ್‌ಗಳು, ಸಂಸದರು ಮತ್ತು ಶಾಸನಸಭೆಯ ಸದಸ್ಯರು ಭಾಗವಹಿಸಿದ್ದು ಭವಿಷ್ಯದ ಪ್ರಜಾಪ್ರಭುತ್ವ, ತಂತ್ರಜ್ಞಾನ ಮತ್ತು ಆಡಳಿತದ ಕುರಿತು ಚರ್ಚಿಸಿದರು.
ಬಾರ್ಬಡೋಸ್ ಶಾಸನಸಭೆಯ ಸ್ಪೀಕರ್ ಆರ್ಥರ್ ಹೋಲ್ಡರ್ ರನ್ನು ಭೇಟಿಯಾಗಿ ಶಾಸಕಾಂಗ, ಡಿಜಿಟಲ್‌ ಕಡೆಗೆ ಪಯಣ, ಮತ್ತು ಜನ-ಕೇಂದ್ರಿತ ಆಡಳಿತದ ಮೂಲಕ ಅಭಿವೃದ್ಧಿ ಕ್ರಮಗಳ ಕುರಿತು ಪ್ರಸ್ತಾಪವಾಯಿತು.
ಆಸ್ಟ್ರೇಲಿಯಾದ ಸೆನೆಟ್ ಅಧ್ಯಕ್ಷೆ ಸ್ಯೂ ಲೈನ್ಸ್ ಮತ್ತು ಜಮೈಕಾದ ಸಂಸತ್ತಿನ ಸ್ಪೀಕರ್ ಜೂಲಿಯೆಟ್ ಹೋಲ್ನೆಸ್ ರೊಂದಿಗೆ ಸಂಸದ ಡಾ.ಕೆ.ಸುಧಾಕರ್ ಸಂವಾದ ನಡೆಸಿದರು. ನವೀಕರಿಸಬಹುದಾದ ಇಂಧನ, ಶಿಕ್ಷಣ, ವ್ಯಾಪಾರ, ಪಾರದರ್ಶಕ ಮತ್ತು ಪರಿಣಾಮಕಾರಿ ಶಾಸಕಾಂಗ ಪ್ರಕ್ರಿಯೆಗಳಿಗಾಗಿ ಕೃತಕ ಬುದ್ಧಿಮತ್ತೆಯ ಬಳಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net