ಕೊಸೆಸಾಂವ್ ಅಮ್ಮನವರ ಚರ್ಚ್‌ನಲ್ಲಿ ಶ್ರೀಸಾಮಾನ್ಯರ ದಿನ ಆಚರಣೆ

commeners day
ಗಂಗೊಳ್ಳಿ ಕೆಥೊಲಿಕ್ ಸಭಾ ಘಟಕದಿಂದ ಕೊಸೆಸಾಂವ್ ಅಮ್ಮನವರ ಚರ್ಚ್‌ನಲ್ಲಿ ಭಾನುವಾರ ಶ್ರೀ ಸಾಮಾನ್ಯರ ದಿನ ಆಚರಿಸಲಾಯಿತು
Published on

ಗಂಗೊಳ್ಳಿ: ಕೆಥೊಲಿಕ್ ಸಭಾ ಘಟಕದಿಂದ ಕೊಸೆಸಾಂವ್ ಅಮ್ಮನವರ ಚರ್ಚ್‌ನಲ್ಲಿ ಭಾನುವಾರ ಶ್ರೀಸಾಮಾನ್ಯರ ದಿನ ಆಚರಿಸಲಾಯಿತು. ಗಂಗೊಳ್ಳಿ ಕೆಥೊಲಿಕ್ ಸಭಾ ಘಟಕದಲ್ಲಿ ಸೇವೆ ನೀಡಿ, ಕುಂದಾಪುರ ವಲಯ ಮತ್ತು ಉಡುಪಿ ಪ್ರಾಂತ್ಯದಲ್ಲಿ ಸೇವೆ ಸಲ್ಲಿಸಿದ ಕಿರಣ್ ಕ್ರಾಸ್ಟೊ, ಜೋನ್ಸನ್ ಡಿ ಆಲ್ಮೇಡಾ, ಜೆರಾಲ್ಡ್ ಕ್ರಾಸ್ತಾ, ಹೆರಿಕ್ ಗೊನ್ಸಾಲ್ವಿಸ್, 34 ವರ್ಷಗಳಿಂದ ಗಂಗೊಳ್ಳಿ ಕೆಥೊಲಿಕ್ ಸಭಾ ಘಟಕಕ್ಕೆ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದವರನ್ನು ಗಂಗೊಳ್ಳಿ ಚರ್ಚ್‌ನ ಶ್ರೀಸಾಮಾನ್ಯ ಆಯೋಗ ಮತ್ತು ಕೆಥೊಲಿಕ್ ಸಭಾ ಘಟಕದಿಂದ ಗೌರವಿಸಲಾಯಿತು.

ಚರ್ಚ್ ಧರ್ಮಗುರು ಥೋಮಸ್ ರೋಶನ್ ಡಿಸೋಜ ಆಶೀರ್ವಚನ ನೀಡಿದರು. ವಿನೋದ್ ಕ್ರಾಸ್ಟೊ ಶುಭಾಶಂಸನೆಗೈದರು. ನಿಯೋಜಿತ ಅಧ್ಯಕ್ಷ ಒವಿನ್ ರೆಬೆಲ್ಲೊ ಉಪಸ್ಥಿತರಿದ್ದರು. ಹಾಲಿ ಅಧ್ಯಕ್ಷ ಎಡ್ವರ್ಡ್ ಫರ್ನಾಂಡಿಸ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ವಿಲ್ಸನ್ ರೇಬೆರೊ ಅತಿಥಿಗಳನ್ನು ಪರಿಚಯಿದರು. ಕ್ಲೆರಾ ರೆಬೆಲ್ಲೊ ಅತಿಥಿಗಳನ್ನು ಗೌರವಿಸಿದರು. ಕಾರ್ಯದರ್ಶಿ ಲೊಯ್ಡ ರೆಬೆಲ್ಲೊ ವಂದಿಸಿದರು. ಕಾರ್ಯಕ್ರಮದ ಸಂಚಾಲಕ ಸೆಲಿನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net