ಬೈಕ್ ಸವಾರನೇ ಸಂಚಾರಿ ಪೊಲೀಸ್ ಆದ!

IMG-20230531-WA0019.jpg
Published on

ಬೆಳಗಾವಿ: ಎಲ್ಲ ವಾಹನ ಸವಾರರು ಟ್ರಾಫಿಕ್ ಜಾಮ್ ಆದರೆ, ಪೊಲೀಸರ ವಿರುದ್ಧ ಗೊನಗುತ್ತಾ ತೆರಳುತ್ತಾರೆ. ಆದರೆ ಇಲ್ಲೊಬ್ಬ ಬೈಕ್ ಸವಾರ ನಗರದಲ್ಲಿ ಭಾರಿ ಸಂಚಾರ ದಟ್ಟೆಯಾಗಿದ್ದನ್ನು ಗಮನಿಸಿ, ಬೈಕ್ ಅನ್ನು ಬದಿಗೆ ಹಾಕಿ ತಾನೇ ಖುದ್ಧಾಗಿ ಟ್ರಾಫಿಕ್ ಪೊಲೀಸರ ರೀತಿಯಲ್ಲಿ ಗಂಟೆಗಟ್ಟಲೇ ಕರ್ತವ್ಯ ನಿರ್ವಹಿಸಿ ಪೊಲೀಸರ ಮೆಚ್ಚುಗೆ ಪಾತ್ರನಾಗಿದ್ದಾನೆ. ಸದಾಶಿವ ನಗರದ ನಿವಾಸಿ ಪ್ರಸಾದ ಚೋಗ್ಲೆ ಸಂಚಾರ ದಟ್ಟನೆ ನಿರ್ವಹಿಸಿದ ವ್ಯಕ್ತಿ. ಈ ಅಪರೂಪದ ಘಟನೆ ನಡೆದಿರುವುದು ಕಪಿಲೇಶ್ವರ ಬ್ರಿಡ್ಜ್ ಬಳಿಯ ಶನಿಮಂದಿರದ ಬಳಿ. ಪ್ರಸಾದ ಚೋಗ್ಲೆ ಅವರು ಕಾರ್ಯಕ್ರಮ ಒಂದಕ್ಕೆ ತೆರಳುತ್ತಿದ್ದಾಗ ಅತೀ ಹೆಚ್ಚು ಸಂಚಾರ ದಟ್ಟನೆ ಆಗಿದ್ದನ್ನು ಗಮನಿ 112ಗೆ ಕರೆ ಮಾಡಿ ತಿಳಿಸಿದ್ದ. ಪೊಲೀಸರು ಒಂದು ಗಂಟೆಯಾದರೂ ಬರದಿದ್ದ ಕಾರಣ ಪ್ರಸಾದ ಅವರೇ ಸಂಚಾರ ದಟ್ಟನೆ ನಿವಾರಿಸಿದರು. ಬಳಿಕ ಸ್ಥಳಕ್ಕೆ ಬಂದ ಸಂಚಾರಿ ಪೊಲೀಸರು ಪ್ರಸಾದನನ್ನು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net