

ಹೊಸನಗರ: ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನ ವಿವಾದದ ಹುಟ್ಟಿಗೆ ಸಾಗರ ಶಾಸಕ ಹರತಾಳು ಹಾಲಪ್ಪ ಕಾರಣ. ದೇವಸ್ಥಾನದ ಆಡಳಿತವನ್ನು ಸರ್ಕಾರಕ್ಕೆ ಹಸ್ತಾಂತರಿಸುವಲ್ಲಿ ಅವರ ಪಾತ್ರ ಇದೆ. ಈಗ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.
ಸರ್ಕಾರದಲ್ಲಿ ಶಾಸಕ ಹಾಲಪ್ಪ ಅವರ ಮಾತು ನಡೆಯುತ್ತಿಲ್ಲ. ಹಾಗೇನಾದರೂ ನಡೆಯುತ್ತಿದ್ದರೆ ಶಾಸಕರು ವಿವಾದ ಬಗೆ ಹರಿಸಬಹುದಿತ್ತು ಎಂದು ಬá-ಧವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.
ಸಿಗಂದೂರು ದೇವಸ್ಥಾನದ ನಿರ್ವಹಣೆಗೆ ರಚಿಸಲಾಗಿರುವ ಸಲಹಾ ಸಮಿತಿಯನ್ನು ಕೂಡಲೇ ರದ್ದು ಮಾಡಬೇಕು. ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸುವ ಅಗತ್ಯವಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ತಾಪಂ ಸದಸ್ಯರಾದ ಚಂದ್ರಮೌಳಿ, ಏರಗಿ ಉಮೇಶ್, ಶ್ರೀನಿವಾಸ ಕಾಮತ್, ಅಶೋಕ ಗೌಡ, ಕುನ್ನೂರು ಮಂಜಪ್ಪ, ಪ್ರಭಾಕರ್, ಸದಾಶಿವ ಶ್ರೇಷ್ಠಿ, ಕೃಷ್ಣಮೂರ್ತಿ ಶೆಟ್ಟಿ ಮತ್ತಿತರರಿದ್ದರು.