ಸಮಗ್ರ ಶಿಕ್ಷಣ ಗುಣಮಟ್ಟ ಯೋಜನೆ, ಸಮಿತಿ ರಚನೆ

New Project (10)
Published on

ಕಾಸರಗೋಡು: ವಿದ್ಯಾರ್ಥಿಗಳು ಶಾಲೆಯಿಂದ ಕಲಿಯುವ ಪಾಠ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗಬೇಕು. ಅವರಿಗೆ ಮಾರ್ಗದರ್ಶಕ ದೀಪಗಳಾಗಬೇಕಾದ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುವ ಜನರಾಗಿರಬೇಕು ಎಂದು ಜಿಪಂ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಹೇಳಿದರು.

ಸಮಗ್ರ ಶಿಕ್ಷಣ ಗುಣಮಟ್ಟ ಯೋಜನೆ ಜಿಲ್ಲಾಮಟ್ಟದ ಘೋಷಣೆ, ಸಮಿತಿ ರಚನೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಶಕುಂತಲಾ ಅಧ್ಯಕ್ಷತೆ ವಹಿಸಿದ್ದರು. ಉಪಕಲೆಕ್ಟರ್ ಪಿ.ಸುರ್ಜಿತ್ ಅತಿಥಿಯಾಗಿದ್ದರು.

ಸಮಗ್ರ ಶಿಕ್ಷಾ ಕೇರಳ ಡಿಪಿಸಿವಿಎಸ್ ಬಿಜುರಾಜ್ ಸಮಗ್ರ ಶಿಕ್ಷಣ ಗುಣಮಟ್ಟ ಯೋಜನೆ ದಾಖಲೆ ಮಂಡಿಸಿದರು. ಕುಂಬ್ಡಾಜೆ ಪಂಚಾಯಿತಿ ಅಧ್ಯಕ್ಷ ಪಿ.ಹಮೀದ್ ಪೊಸಳಿಕೆ, ಡಯಟ್ ಪ್ರಾಂಶುಪಾಲ ರಘುರಾಮ ಭಟ್, ಕೈಟ್ ಜಿಲ್ಲಾ ಸಂಯೋಜಕಿ ರೋಜಿ ಜೋಸೆಫ್, ವಿದ್ಯಾಕರ್ಣಂ ಜಿಲ್ಲಾ ಸಂಯೋಜಕ ಸುನೀಲ್ ಕುಮಾರ್, ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಟಿ.ವಿ.ಮಧುಸೂದನನ್ ಸ್ವಾಗತಿಸಿದರು. ವಿಎಚ್‌ಎಸ್‌ಇ ಸಹಾಯಕ ನಿರ್ದೇಶಕಿ ಇ.ಆರ್.ಉದಯಕುಮಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net