

ಹುಬ್ಬಳ್ಳಿ: ಇಲ್ಲಿನ ವಾರ್ಡ್ ನಂ. 54ರ ಜಗದೀಶ ನಗರದ ಭಗತಸಿಂಗ್ ಸರ್ಕಲ್ ಬಳಿ ನೂತನವಾಗಿ ನಿರ್ವಿುಸಿರುವ ಶಿಕ್ಕಲಗಾರ ಸಮಾಜದ ಸಮುದಾಯ ಭವನವನ್ನು ಸೋಮವಾರ ಉದ್ಘಾಟಿಸಲಾಯಿತು.
ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿ ಮಾತನಾಡಿ, ಶಿಕ್ಕಲಗಾರ ಸಮಾಜದವರು ಶ್ರಮಜೀವಿಗಳು. ಈ ಸಮಾಜದ ಏಳಿಗೆಗೆ ಬದ್ಧನಾಗಿದ್ದೇನೆ. ಭವನದ ಮೇಲ್ಚಾವಣಿ ನಿರ್ವಣಕ್ಕೆ ಶಾಸಕರ ಅನುದಾನ ಮತ್ತು ಮಹಾನಗರ ಪಾಲಿಕೆ ಅನುದಾನ ನೀಡಲು ಸಿದ್ಧ ಎಂದರು
ಶಿಕ್ಕಲಗಾರ ಯುವಕ ಸಂಘದ ಸಾರ್ವಜನಿಕ ಶ್ರೀ ಗಣಪನ ದರ್ಶನ ಪಡೆದು, ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು.
ಪಾಲಿಕೆ ಮಾಜಿ ಸದಸ್ಯ ಲಕ್ಷ್ಮಣ ಕಲಾಲ, ಹಿರಿಯರಾದ ದುರ್ಗಪ್ಪ ಮುದ್ದಿ, ನಾಗೇಶ ಕಟ್ಟಿಮನಿ, ಬಸವರಾಜ ಕಟ್ಟಿಮನಿ, ಜಯತೀರ್ಥ ಕಟ್ಟಿ, ಹರೀಶ ಜಂಗ್ಲಿ, ಮಂಜುನಾಥ ಬ್ಯಾಡಗಿ, ಸಂಜು ಜಂಗ್ಲಿ, ಕಿಶನ್ ಬಿಲಾನಾ ಇತರರು ಉಪಸ್ಥಿತರಿದ್ದರು.