ರುದ್ರಾಕ್ಷಿ ಮಠದ ಅಭಿವೃದ್ಧಿಗೆ ಬದ್ಧ

h1-abbayya
filter: 0; fileterIntensity: 0.0; filterMask: 0; captureOrientation: 90; module: video; hw-remosaic: false; touch: (-1.0, -1.0); modeInfo: Beauty ; sceneMode: 0; cct_value: 5468; AI_Scene: (-1, -1); aec_lux: 111.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 47;
Published on

ಹುಬ್ಬಳ್ಳಿ: ಇತಿಹಾಸ ಪ್ರಸಿದ್ಧ ರುದ್ರಾಕ್ಷಿ ಮಠದಲ್ಲಿ ಸಮುದಾಯ ಭವನ ಮತ್ತು ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.

ಇಲ್ಲಿಯ ಪೂರ್ವ ವಿಧಾನಸಭಾ ಕ್ಷೇತ್ರದ ಮಂಗಳವಾರ ಪೇಟೆಯ ರುದ್ರಾಕ್ಷಿ ಮಠದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿಯ ಯೋಜನೆ ಅನುದಾನದಡಿ ಪೇವರ್ಸ್(ನೆಲಹಾಸು) ಅಳವಡಿಸುವ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಶ್ರೀಮಠದ ಪರಂಪರೆಗೆ ದೊಡ್ಡ ಇತಿಹಾಸವಿದೆ. ಶ್ರೀಮಠದ ಪೀಠಾಧಿಪತಿ ಶ್ರೀ ಬಸವಲಿಂಗ ಸ್ವಾಮೀಜಿ ಯಾವತ್ತೂ ಅನುದಾನ ಕೇಳಿದವರಲ್ಲ. ಆದರೆ, ಶ್ರೀಮಠದ ಶ್ರೇಯೋಭಿವೃದ್ಧಿ ನಮ್ಮ ಆದ್ಯ ಕರ್ತವ್ಯವಾಗಿದೆ. ಹೀಗಾಗಿ ಮೊದಲ ಹಂತದಲ್ಲಿ ಯಾತ್ರಿ ನಿವಾಸ ಮತ್ತು ಸಮುದಾಯ ಭವನ ನಿರ್ಮಾಣದ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಪಿಡಬ್ಲುೃಡಿ ಸಹಾಯಕ ಇಂಜನಿಯತ್ ಮೇಘಾ ವಿ. ಢಗೆ ಅವರಿಗೆ ಮೊದಲ ಹಂತದಲ್ಲಿ 1 ಕೋಟಿ ರೂ. ಅನುದಾನದ ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ಶಾಸಕರು ಸೂಚಿಸಿದರು.

ಶ್ರೀೀ ಬಸವಲಿಂಗ ಸ್ವಾಮೀಜಿ, ಮುಖಂಡರಾದ ರಜನಿಕಾಂತ ಬಿಡಜವಾಡ, ವಿಜಯಕುಮಾರ ಕುಂದನಹಳ್ಳಿ, ಮಹಾಂತೇಶ ಗಿರಿಮಠ, ಯಲ್ಲಪ್ಪ ಮಡಿವಾಳ, ಚೈತನ್ಯ ಬಿಜವಾಡ, ಕಾಶಪ್ಪ ಬಿಜವಾಡ, ಬಸವರಾಜ ಕುಸುಗಲ್, ರಾಹುಲ್ ಬೆಳದಡಿ, ಆರೀಫ್ ದೊಡ್ಡಮನಿ, ಅನೀಸ್ ನಾಯಕ್, ಸಮೀವುಲ್ಲಾ, ರಮೇಶ ಸಿಂಧಗಿ, ನೀಲಕಂಠ ಕರಪಿ ಅನೇಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net