ಹುನಗುಂದ ಮತಕ್ಷೇತ್ರದ ಅಭಿವೃದ್ಧಿಗೆ ಬದ್ಧ

Vijayananda Kashapanavara, Development,
ಹುನಗುಂದದಲ್ಲಿ ವಿಜಯಾನಂದ ಕಾಶಪ್ಪನವರ ಅವರನ್ನು ಸನ್ಮಾನಿಸಲಾಯಿತು. ಪ್ರಕಾಶ ಕಠಾಣಿ, ಪಿ.ಬಿ.ಹುಲ್ಯಾಳ, ಎಸ್.ಎಂ.ಉಪ್ಪಾರ, ಎಂ.ಎ.ಸಂಗಮಕರ, ಬಿ.ಎ.ಆವಟಿ ಇದ್ದರು.
Published on

ಹುನಗುಂದ: ಎಲ್ಲ ಸಮುದಾಯದ ಜನರು ಹುನಗುಂದ ಮತಕ್ಷೇತ್ರದ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ನನ್ನನ್ನು 2ನೇ ಬಾರಿಗೆ ಆಯ್ಕೆ ಮಾಡಿ ನನಗೆ ಹೆಚ್ಚಿನ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಪಟ್ಟಣದ ತಾಲೂಕು ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಭಾಭವನದಲ್ಲಿ ವಕೀಲರ ಸಂಘದಿಂದ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಹುನಗುಂದ ಮತಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ತಾಲೂಕಿನ ಜನರಿಗೆ ನ್ಯಾಯ ಒದಗಿಸಲು ಹಿರಿಯ ವಕೀಲರ ಪಾತ್ರ ಮಹತ್ವದ್ದಾಗಿದೆ. ಹುನಗುಂದ ವಕೀಲರ ಭವನ ನಿರ್ಮಾಣಕ್ಕೆ ಕೂಡಲೇ ಸಂಬಂಧಪಟ್ಟ ಅಧಿಕಾರಿಯೊಂದಿಗೆ ಮಾತನಾಡಿ ಇದೇ ತಿಂಗಳಲ್ಲಿಯೇ ಅಡಿಗಲ್ಲು ಇಡುವಂತೆ ಮಾಡುವೆ. ಇಳಕಲ್ಲ ತಾಲೂಕು ನ್ಯಾಯಾಲಯಕ್ಕೆ ಜಾಗ ಗುರುತಿಸಿ ಶಾಶ್ವತ ಕಟ್ಟಡವನ್ನು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

ವಕೀಲರಾದ ಮಹಾಂತೇಶ ಅವಾರಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಕಠಾಣಿ, ಮಾಜಿ ಅಧ್ಯಕ್ಷ ಎಂ.ಬಿ.ದೇಶಪಾಂಡೆ, ವಿ.ಆರ್.ಜನಾದ್ರಿ, ಎಸ್.ಎಂ.ದೇಸಾಯಿ, ವಿ.ಬಿ.ದಮ್ಮೂರಮಠ, ರಾಜಕುಮಾರ ಬಾದವಾಡಗಿ ಮಾತನಾಡಿದರು.

ಉಪಾಧ್ಯಕ್ಷ ಪಿ.ಬಿ.ಹುಲ್ಯಾಳ, ಕಾರ್ಯದರ್ಶಿ ಎಸ್.ಎಂ.ಉಪ್ಪಾರ, ಎಂ.ಎ.ಸಂಗಮಕರ, ಇಳಕಲ್ಲ ವಕೀಲರ ಸಂಘದ ಬಿ.ಎ.ಆವಟಿ, ಸಿ.ಬಿ.ಸಜ್ಜ, ವೀರೇಶ ಬಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net