ವಕೀಲರ ಹಿತರಕ್ಷಣೆಗೆ ಬದ್ಧ

HSD vakilara sangha 27 p2
Published on

ಹೊಸದುರ್ಗ: ತಾಲೂಕಿನ ವಕೀಲರ ಹಿತರಕ್ಷಣೆ ಮಾಡುವ ಜತೆಗೆ ವಕೀಲರ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಸಂಘದ ತಾಲೂಕಾಧ್ಯಕ್ಷ ಎಚ್.ಬಿ.ರವಿಕುಮಾರ್ ತಿಳಿಸಿದರು.

ಪಟ್ಟಣದ ವಕೀಲರ ಭವನದಲ್ಲಿ ಬುಧವಾರ ತಾಲೂಕು ವಕೀಲರ ಸಂಘ ಅಯೋಜಿಸಿದ್ದ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದಲ್ಲಿ ಬಾಕಿ ಉಳಿದಿರುವ ಕಾರ್ಯಗಳನ್ನು ಎಲ್ಲರ ಸಹಕಾರ ಪಡೆದು ಪೂರ್ಣಗೊಳಿಸಲಾಗುವುದು. ಪ್ರತಿಯೊಬ್ಬ ವಕೀಲರ ಗೌರವವನ್ನು ಕಾಪಾಡುವ ಸಂಕಲ್ಪದೊಂದಿಗೆ ಹೊಸ ತಂಡ ಕೆಲಸ ಮಾಡಲಿದೆ. ಎಲ್ಲರ ಸಲಹೆ ಸೂಚನೆಯ ಅಗತ್ಯವಿದೆ ಎಂದು ಹೇಳಿದರು.

ಮಾಜಿ ಶಾಸಕ ಟಿ.ಎಚ್.ಬಸವರಾಜಪ್ಪ, ವಕೀಲರಾದ ಪಾಲನೇತ್ರಪ್ಪ, ಅಂಜನ್ ಕುಮಾರ್, ಮಲ್ಲಿಕಾರ್ಜುನ್, ಶಿವಲಿಂಗಪ್ಪ, ಷಡಕ್ಷರಪ್ಪ, ಬಸವಲಿಂಗಪ್ಪ, ನರೇಂದ್ರ ಬಾಬು, ಗಂಗಾಧರ್ ಇತರರಿದ್ದರು.

ಕಾರ್ಯಕಾರಿ ಸಮಿತಿ-ಅಧ್ಯಕ್ಷ: ಎಚ್.ಬಿ.ರವಿಕುಮಾರ್, ಉಪಾಧ್ಯಕ್ಷ: ಜಗದೀಶ ನಾಯ್ಕ, ಕಾರ್ಯದರ್ಶಿ: ಇ.ಟಿ.ರಮೇಶ್, ಖಜಾಂಚಿ: ಟಿ.ಚಂದ್ರಪ್ಪ, ಸಹ ಕಾರ್ಯದರ್ಶಿ: ಎಚ್.ಹನುಮಂತಪ್ಪ, ನಿರ್ದೇಶಕರು: ಓಂಕಾರಸ್ವಾಮಿ, ಎಚ್.ಎಸ್.ಲೋಕೇಶ, ಟಿ.ಬಿ.ಮೈಲಾರಪ್ಪ, ರಂಗಸ್ವಾಮಿ, ಜಿ.ಎಸ್.ಲಕ್ಕಪ್ಪ, ಎಂ.ಆರುಣ್, ಕೆ.ಟಿ.ಮಂಜುನಾಥ್, ರಂಜಿತ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net