

ಲೋಕಾಪುರ : ಸರ್ಕಾರದಿಂದ ಸಿಗುವ ಸೌಲಭ್ಯ ರೈತರಿಗೆ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಎಪಿಎಂಸಿ ಅಧ್ಯಕ್ಷ ಸಂಗಪ್ಪ ಇಮ್ಮನ್ನವರ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಜಾರಿಗೊಳಿಸಿದ ಕೆಲವು ಯೋಜನೆ ರದ್ದುಪಡಿಸಿದ್ದರಿಂದ ಎಪಿಎಂಸಿ ಮಾರುಕಟ್ಟೆಗಳು ಆದಾಯವಿಲ್ಲದೆ ಸಂಕಷ್ಟದಲ್ಲಿವೆ. ಆದ್ದರಿಂದ ಎಪಿಎಂಸಿಗೆ ಬೇಕಾಗುವ ಸೌಲಭ್ಯ ಒದಗಿಸಲು ಹಾಗೂ ರೈತರ ಏಳಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದರು.
ನಾಮ ನಿರ್ದೇಶಿತ ಸದಸ್ಯರಾದ ಭೀಮಪ್ಪ ಮೆಟಗುಡ್ಡ, ಮಲ್ಲಪ್ಪ ಮಂಟೂರ, ವೆಂಕಟೇಶ ಅಂಕಲಗಿ, ಲಕ್ಕಪ್ಪ ಹಂಚಿನಾಳ, ಸೋಮಪ್ಪ ಹೊಟ್ಟೆಪ್ಪನವರ, ಪಾಂಡುರಂಗ ಹುವನ್ನವರ, ದಾನಪ್ಪ ಕವಳ್ಳಿ, ಬಸವರಾಜ ಸೊಕನಾದಗಿ, ಪ್ರಕಾಶ ಮಾಂಗ, ಉರ್ ತಳಗೇರಿ ಅವರನ್ನು ಎಪಿಎಂಸಿ ವರ್ತಕರು ಸನ್ಮಾನಿಸಿದರು.
ಅಲ್ಲಾಭಕ್ಷ ಯಾದವಾಡ, ಬಸವರಾಜ ಹೊಸಕೊಟಿ, ಬಸವರಾಜ ಉದಪುಡಿ, ರಮೇಶ ಕಗಲಗೊಂಬ, ಈರಣ್ಣ ಕಡಕೋಳ, ಚಿನ್ಮಯ ಉದಪುಡಿ, ರಂಗನಗೌಡ ಗೋವಿಂದಗೌಡ್ರ, ದಾಲವ ನಧಾಪ, ಕುತುಬು ಅತ್ತಾರ, ವಿರೇಶ ಪಂಚಕಟ್ಟಿಮಠ, ರೋಹಿತ ನಿಂಗನಗೌಡ್ರ, ಗುರು ಮೋದಿ, ಜಗದೀಶ ಕಾಜಗಾರ, ಶಬ್ಬೀರ ಚೌದ್ರಿ, ಶಂಕರ ತೇಲಿ, ಭೀಮಶಿ ಅವರಾದಿ, ಶಂಕರ ಉದಪುಡಿ, ಕುತುಬು ಗುಳೆದಗುಡ್ಡ, ವಿನಾಯಕ ಉದಪುಡಿ, ಅರುಣ ನರಗುಂದ, ನಬಿ ಮೇಲಿನಮನೆ ಮತ್ತಿತರರಿದ್ದರು.