ಕಾಳಗಿ; ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಬದ್ಧ- ಡಿಸಿ ತರನ್ನುಮ್​

PH 7
Published on

ಕಾಳಗಿ: ತಾಲೂಕಿನಲ್ಲಿನ ಐತಿಹಾಸಿಕ ಸ್ಥಳಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭರವಸೆ ನೀಡಿದರು.

ದಕ್ಷಿಣ ಕಾಶಿ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ಸೋಮವಾರ ಸಂಜೆ ಭೇಟಿ ನೀಡಿ ದರ್ಶನ ಪಡೆದ ಅವರು, ಪುರಾತನ ದೇಗುಲದ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವೆ. ಬೇಲೂರು, ಹಳೆಬೀಡಿನ ರೀತಿಯಲ್ಲಿಯೇ ಕಂಗೊಳಿಸುವ ನಮ್ಮಲ್ಲಿನ ಸ್ಮಾರಕಗಳ ರಕ್ಷಣೆ ಕಾರ್ಯ ಆಗಬೇಕಿದೆ. ಪ್ರತಿಯೊಬ್ಬರೂ ಶಿಲ್ಪ ಕಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕು. ನೈಸರ್ಗಿಕ ಸಂಪತ್ತನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಳಿಕ ನೀಲಕಂಠ ಕಾಳೇಶ್ವರ ದೇವರಿಗೆ ಮಂಗಳಾರತಿ ಮಾಡಿ, ದರ್ಶನ ಪಡೆದರು. ಗಡಗಿ ಬಾವಿ, ವಿಷ್ಣು ತೀರ್ಥ, ರೌದ್ರಾವತಿ ನದಿ, ಸೂಗೂರಿನ ಶ್ರೀ ಲಕ್ಷಿö್ಮÃ ವೇಂಕಟೇಶ್ವರ ದೇವಸ್ಥಾನ, ಕೋರವಾರ ಅಣಿ ವೀರಭದ್ರೇಶ್ವರ ದೇಗುಲ, ಮಂಗಲಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಹಸೀಲ್ದಾರ್ ಘಮಾವತಿ ರಾಠೋಡ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ ತೆಲಂಗ, ಲೋಕೋಪಯೋಗಿ ಇಲಾಖೆ ಎಇಇ ಸಿದ್ರಾಮ ದಂಡಗುಲಕರ್, ದೇವಸ್ಥಾನದ ಅಧ್ಯP್ಷÀ ಶಿವಶರಣಪ್ಪ ಕಮಲಾಪುರ, ಪ್ರಮುಖರಾದ ಜಗನ್ನಾಥ ಚಂದನಕೇರಿ, ಶಿವುಕುಮಾರ ಕಮಲಾಪುರ, ಶಿವುಕುಮಾರ ಕಮಕನೂರ, ಮಂಜುನಾಥ ಮಹಾರುದ್ರ, ನರಸಯ್ಯ ಗುತ್ತೇದಾರ್ ಇತರರಿದ್ದರು.

ನೀರೋ ಎಳೆನೀರೋ !: ಪುರಾಣ ಪ್ರಸಿದ್ಧ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನ ಪ್ರಾಂಗಣದಲ್ಲಿರುವ ಗಡಗಿ ಬಾವಿಯಲ್ಲಿನ ಪುಟಿದೇಳುವ ಬುಗ್ಗಿಗೆ ಭೇಟಿ ನೀಡಿ, ಅಲ್ಲಿನ ಜಲವನ್ನು ಸ್ವೀಕರಿಸಿದರು. ಇದೇನು ನೀರೋ, ಎಳೆನೀರೋ… ಇಷ್ಟೊಂದು ಸಿಹಿಯಾಗಿದೆಯಲ್ಲ. ಬುಗ್ಗಿಯ ಪಾವಿತ್ರÈತೆ ಹಾಳಾಗದಂತೆ ಎಚ್ಚರಿಕೆ ವಹಿಸಿ. ನೀರು ಕಲುಷಿತವಾಗದಂತೆ ನೋಡಿಕೊಳ್ಳಿ ಎಂದು ದೇವಸ್ಥಾನದ ಪ್ರಮುಖರಿಗೆ ಡಿಸಿ ಫೌಜಿಯಾ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net