ಗುಡ್ಡಾಪುರ ಅಭಿವೃದ್ಧಿಗೆ ಬದ್ಧ

Committed to development of Guddapur
ತಿಕೋಟಾ ಪಟ್ಟಣದ ಬಸವೇಶ್ವರ ವತ್ತದ ಸಮೀಪವಿರುವ ಎಂ.ಎಸ್​. ಮಂಟೂರ ಮನೆಯಲ್ಲಿ ಗುಡ್ಡಾಪುರ ದಾನಮ್ಮ ದೇವಿ ದೇವಸ್ಥಾನ ಟ್ರಸ್ಟ್​ ಅಧ್ಯಕ್ಷ ವಿಜುಗೌಡ ಎಸ್​. ಪಾಟೀಲ ಅವರನ್ನು ಯುವ ಮಿತ್ರರು ಸನ್ಮಾನಿಸಿದರು. ಮಹಾನಿಂಗ ಮಂಟೂರ, ಮಂಜು ಕುಂಬಾರ ಮನಗೂಳಿ, ಸಿದ್ರಾಮ ಪೂಜಾರಿ ಇತರರಿದ್ದರು.
Published on

ತಿಕೋಟಾ : ಗುಡ್ಡಾಪುರ ದೇವಸ್ಥಾನಕ್ಕೆ ಕರ್ನಾಟಕದ ಭಕ್ತರು ದಾನಮ್ಮ ದೇವಿ ದರ್ಶನಕ್ಕೆ ಬರುತ್ತಾರೆ. ಆದರೆ ವಸತಿ ಸೌಲಭ್ಯವಿಲ್ಲದೆ ಕಷ್ಟವಾಗುತ್ತಿತ್ತು. ದೇವಸ್ಥಾನದ ಟ್ರಸ್ಟ್​ ಅಧ್ಯಕ್ಷತೆ ವಹಿಸಿಕೊಂಡ ನಂತರ ಎಲ್ಲಾ ಸಮಸ್ಯೆಗಳಿಗೂ ಇತಿಶ್ರೀ ಹಾಡಲು ನಿರ್ಧರಿಸಿದ್ದೇನೆ ಎಂದು ವಿಜುಗೌಡ ಎಸ್​. ಪಾಟೀಲ ಹೇಳಿದರು.

ಶನಿವಾರ ಪಟ್ಟಣದ ಯುವ ಮಿತ್ರರಿಂದ ಬಸವೇಶ್ವರ ವೃತ್ತದ ಎಂ.ಎಸ್​. ಮಂಟೂರ ಅವರ ಮನೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ರಸ್ತೆ, ಚರಂಡಿ, ಇನ್ನಿತರ ಸೌಕರ್ಯಗಳನ್ನು ಸರಿಪಡಿಸಲಾಗುವುದು. ಅಧಿಕಾರ ಸ್ವೀಕರಿಸಿ ಕೇವಲ ಎರಡು ತಿಂಗಳಲ್ಲೇ ಕರ್ನಾಟಕ ಭವನ ಉದ್ಘಾಟನೆ, ಗಡಿನಾಡು ಕನ್ನಡಿಗರಿಗೆ ಸಾಂಸತಿಕ ಕಾರ್ಯಕ್ರಮ, ಗುಡ್ಡಾಪುರ ಅಭಿವೃದ್ಧಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು 6 ಕೋಟಿ ರೂ. ಮಂಜೂರು ಮಾಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಸದಸ್ಯರಾದ ಮಹಾನಿಂಗ ಮಂಟೂರ, ಮಂಜು ಕುಂಬಾರ ಮನಗೂಳಿ, ಸಿದ್ರಾಮ ಪೂಜಾರಿ, ರಾವತ ಕುಂಬಾರ, ರಾಮು ಕುಂಬಾರ, ಚಂದು ತೋರವಿ, ಸಂಜು ಮಂಟೂರ, ಬಸು ಬಂಡಿ, ಮಾಜಿ ಯೋಧ ಶ್ರೀಶೆಲ ಮಂಟೂರ, ನಂದು ಕುಂಬಾರ, ಸಂಗಮೇಶ ತಾಳಿಕೋಟಿ, ಸತೀಶ ಜಾಧವ, ಡಾ. ವೈ.ಬಿ. ಜತ್ತಿ, ರಾಜು ಹುಲ್ಲೂರ ವಿರುಪಾ ಮಂಟೂರ, ಮಾಜಿ ಯೋಧರಾದ ಕಲ್ಲಪ್ಪ ಮಾಳಿ. ಮಾಧು ಕೋಣ್ಣೂರ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net