ಸಂಚಾರ ಠಾಣೆ ಮುಖ್ಯಪೇದೆ ನೇಣುಬಿಗಿದು ಆತ್ಮಹತ್ಯೆ

Head constable jayanna uppara
ಮುಖ್ಯಪೇದೆ ಜಯಪ್ಪ ಉಪ್ಪಾರ್
Published on

ಶಿವಮೊಗ್ಗ: ನಗರದ ಪಶ್ಚಿಮ ಸಂಚಾರ ಪೊಲೀಸ್ ಸ್ಟೇಷನ್ ಮುಖ್ಯಪೇದೆಯೊಬ್ಬರು ಸಮವಸ್ತ್ರದಲ್ಲೇ ವಿನೋಬನಗರದ ತಮ್ಮ ಮನೆಯಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಯಪ್ಪ ಉಪ್ಪಾರ್ ಅವರು ಮನೆಗೆ ವಾಪಸ್ ತೆರಳಿದ್ದರು. ಮೂರು ದಿನಗಳ ಹಿಂದೆ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತ್ನಿಯ ಅಗಲಿಕೆಯಿಂದ ತೀವ್ರವಾಗಿ ಮನನೊಂದಿದ್ದರು ಜಯಪ್ಪ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕರ್ತವ್ಯಕ್ಕೆ ಹಾಜರಾಗಿದ್ದ ಜಯಪ್ಪ ಉಪ್ಪಾರ್ ಅವರು ಹಗ್ಗ ಖರೀದಿಸಿ ವಿನೋಬನಗರ ಚೌಕಿ ಬಳಿಯ ಚೌಡಪ್ಪ ಬಡಾವಣೆಯಲ್ಲಿರುವ ತಮ್ಮ ಮನೆಗೆ ತೆರಳಿ ಮನೆ ಮೇಲುಗಡೆ ಇರುವ ಶೀಟ್‌ಗೆ ಹಾಕಲಾಗಿದ್ದ ಬೀಮ್ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಮೂಲತಃ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯ ಜಯಪ್ಪ ಕುಟುಂಬದೊಂದಿಗೆ ಹಲವು ವರ್ಷಗಳಿಂದ ಶಿವಮೊಗ್ಗದಲ್ಲೇ ನೆಲೆಸಿದ್ದರು. ವಿನೋಬನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net