

ಪುತ್ತೂರು: ಸಾಲದ ಹೊರೆ ತಾಳಲಾರದೆ ಖಾಸಗಿ ಕಂಪನಿ ನೌಕರ, ಪೆರ್ನೆ ಕಾರ್ಲ ಅತ್ರಬೈಲು ನಿವಾಸಿ ಜಯಂತ್(೩೫) ಎಂಬುವರು ಪುತ್ತೂರಿನ ಲಾಡ್ಜ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೈದಿದ್ದಾರೆ.
ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿದ್ದ ಅವರು ವಿಪರೀತ ಸಾಲ ಮಾಡಿಕೊಂಡಿದ್ದರು. ಕಂಪನಿಯವರು ಮನೆಗೆ ಬಂದು ಸಾಲ ಮರುಪಾವತಿಸುವಂತೆ ಕೇಳಿಕೊಂಡಿದ್ದಾರು ಎನ್ನಲಾಗಿದೆ.
ಪುತ್ತೂರಿಗೆ ಆಗಮಿಸಿದ ಜಯಂತ್, ಲಾಡ್ಜ್ ಒಂದರಲ್ಲಿ ವಿಷ ಸೇವಿಸಿ ತಾಯಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವ ಸಂದರ್ಭ ಮೃತಪಟ್ಟಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಯಂತ್ ಅವರು ತಾಯಿ, ಪತ್ನಿ ಹಾಗೂ ೬ ತಿಂಗಳ ಮಗುವನ್ನು ಅಗಲಿದ್ದಾರೆ.
ಜಯಂತ್ ಡೆತ್‌ನೋಟ್ ಬರೆದಿದ್ದು, ಅದರಲ್ಲಿ ಕೆಲವು ವ್ಯಕ್ತಿಗಳ ಹೆಸರಿತ್ತು. ಆ ಹೆಸರನ್ನು ಮುಚ್ಚಿಡುವ ಕಾರ್ಯ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿದಾಡುತ್ತಿದೆ.