ಲೋಕಾಪುರವನ್ನು ಸುಂದರ ಪಟ್ಟಣವಾಗಿಸಲು ಪಣ

Commitment to making Lokapura a beautiful city
ಲೋಕಾಪುರದಲ್ಲಿ ಪಪಂನ ಅನುದಾನದಲ್ಲಿ ವಿವಿಧ ಯೋಜನೆ ಅಡಿ ಲಾನುಭಾವಿಗಳಿಗೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಸೋಲಾರ್ ಲೈಟ್, ಹೊಲಿಗೆ ಯಂತ್ರ, ಪೌರಕಾರ್ಮಿಕರಿಗೆ ಸುರಕ್ಷಾದಿರಿಸು ಹಾಗೂ ವಿದ್ಯಾರ್ಥಿಗಳಿಗೆ ಲ್ಯಾಪಟಾಪ ವಿತರಿಸಿದರು. ಶೋಕ ಕಿವಡಿ, ಗುರುರಾಜ ಉದಪುಡಿ, ರಫೀಕ್ ಬೈರಕದಾರ, ಹೊಳಬಸು ದಂಡಿನ, ಭೀರಪ್ಪ ಮಾಯನ್ನವರ, ಗೋವಿಂದ ಕೌಲಗಿ, ಸಂಗಪ್ಪ ಇಮ್ಮನ್ನವರ, ಲೋಕಣ್ಣ ಕೊಪ್ಪದ, ಅಬ್ದುಲ್ ರೆಹಮಾನ ತೋರಗಲ್ಲ ಮತ್ತಿತರರಿದ್ದಾರೆ.
Published on

ಲೋಕಾಪುರ: ಪಟ್ಟಣವನ್ನು ರಾಜ್ಯದಲ್ಲಿಯೇ ಒಂದು ಸುಂದರ ಹಾಗೂ ಮಾದರಿ ಪಟ್ಟಣವಾಗಿ ನಿರ್ಮಾಣ ಮಾಡುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಪಟ್ಟಣ ಪಂಚಾಯತ್‌ನ ನಗರೋತ್ಥಾನ ಹಂತ-4, ಸ್ಥಳೀಯ ನಿಧಿ, ಎಸ್.ಎ್.ಸಿ ಯೋಜನೆಯಡಿ ಲಾನುಭಾವಿಗಳಿಗೆ ಕಿಟ್ ವಿತರಣೆ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಮುಧೋಳ ತಾಲೂಕಿನ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಈ ಕುರಿತಂತೆ ನೀಲಿನಕ್ಷೆ ತಯಾರಿಸುತ್ತಿದ್ದು, ಈ ಅಭಿವೃದ್ಧಿ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಹಾಗೂ ಈಗ ಚಾಲನೆ ನೀಡಿರುವ ಎಲ್ಲ ಕಾಮಗಾರಿಗಳನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಮುಧೋಳ ತಾಲೂಕಿನಲ್ಲಿ ಸುಮಾರ 30 ವರ್ಷಗಳ ಕಾಲ ರಾಜಕಿಯ ಮಾಡಿ ಅಧಿಕಾರ ಅನುಭವಿಸಿದವರು ಮಹಿಳೆಯರಿಗೆ ಸುಸಜ್ಜಿತವಾದ ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಿಸಿಲ್ಲ. ಆದ್ದರಿಂದ ನಮ್ಮ ಸರ್ಕಾರ ಪಟ್ಟಣದಲ್ಲಿ ನಾಲ್ಕು ಶೌಚಗೃಹಗಳನ್ನು ನಿರ್ಮಿಸುತ್ತಿದೆ. ಆದರೆ, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಸಮಸ್ಯೆಯಿಂದಾಗಿ ಕಾಮಗಾರಿ ಮುಗಿಯುವುದು ತಡವಾಗಿದೆ. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದರು.

ವಿವಿದ ಯೋಜನೆ ಅಡಿ ಲಾನುಭಾವಿಗಳಿಗೆ ಸೋಲಾರ ಲೈಟ್, ಹೊಲಿಗೆ ಯಂತ್ರ, ಪೌರಕಾರ್ಮಿಕರಿಗೆ ಸುರಕ್ಷಾ ದಿರಿಸು ಹಾಗೂ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದರು.

ಅಶೋಕ ಕಿವಡಿ, ಗುರುರಾಜ ಉದಪುಡಿ, ರಫೀಕ್ ಬೈರಕದಾರ, ಹೊಳಬಸು ದಂಡಿನ, ಭೀರಪ್ಪ ಮಾಯನ್ನವರ, ಗೋವಿಂದ ಕೌಲಗಿ, ಸಂಗಪ್ಪ ಇಮ್ಮನ್ನವರ, ಲೋಕಣ್ಣ ಕೊಪ್ಪದ, ಅಬ್ದುಲ್ ರೆಹಮಾನ ತೋರಗಲ್ಲ, ಕುಮಾರ ಕಾಳಮನ್ನವರ, ಸಿದ್ದು ಕಿಲಾರಿ, ರೇಖಾ ಪಾಟೀಲ, ಹನಮವ್ವ ಈರನ್ನವರ, ಮುತ್ತಪ್ಪ ಗಡದವರ, ಸುರೇಶ ಸಿದ್ದಾಪೂರ, ಮಹಾದೇವ ದೊಡಮನಿ, ಗಣಪತಿ ಗಸ್ತಿ, ಸುಲ್ತಾನ ಕಲಾದಗಿ, ತಹಸೀಲ್ದಾರ್ ಮಹಾದೇವ ಸನಮೂರಿ, ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ಗೋವಿಂದಪ್ಪ ಗುಜ್ಜನವರ, ಆನಂದ ಹೀರೆಮಠ, ಇಒ ಉಮೇಶ ಸಿದ್ದನಾಳ, ಬೀಮನಗೌಡ ಪಾಟೀಲ, ಮಹಾನಿಗಪ್ಪ ಹುಂಡೆಕರ್, ಬೀರಪ್ಪ ಮಾಯನ್ನವರ, ಮಂಜುನಾಥ ಗಲಗಲಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net