ನ್ಯಾಯಾಂಗದಲ್ಲಿ ಕೆಲಸ ಮಾಡುವವರಿಗೆ ಬದ್ಧತೆ ಅಗತ್ಯ

03 tth 03
ಇತ್ತೀಚೆಗೆ ನಿಧನರಾದ ವಕೀಲ ವೈ.ಎ.ಪ್ರಭಾಕರ್ ಗೌರವಾರ್ಥ ಹೊರತಂದ ಪ್ರಭಾಮಂಡಲ ಹೊತ್ತಿಗೆಯನ್ನು ನಿವೃತ್ತ ನ್ಯಾಯಾಽÃಶ ಪ್ರಕಾಶ್ ನಾಡಿಗೇರ ಬಿಡುಗಡೆಗೊಳಿಸಿದರು. ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಸೋಮಶೇಖರ್, ಮನೋಹರ ರಾವ್, ಪ್ರಭಾಕರ ಶರ್ಮಾ ಇತರರಿದ್ದರು.
Published on

ತೀರ್ಥಹಳ್ಳಿ: ನ್ಯಾಯಾಂಗ ವ್ಯವಸ್ಥೆ ಮೇಲೆ ಅಪನಂಬಿಕೆ ಬರದಂತೆ ನ್ಯಾಯಾಂಗ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬದ್ಧತೆ ಅಗತ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಶಾಸಕಾಂಗ, ಕಾರ್ಯಾಂಗದAತೆ ನ್ಯಾಯಾಂಗವೂ ಮಲಿನವಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಆತಂಕ ವ್ಯಕ್ತಪಡಿಸಿದರು.
ಇತ್ತೀಚೆಗೆ ನಿಧನರಾದ ವಕೀಲ ವೈ.ಎ.ಪ್ರಭಾಕರ್ ಗೌರವಾರ್ಥ ತಾಲೂಕು ವಕೀಲರ ಸಂಘ, ಬ್ರಾಹ್ಮಣ ಸಂಘ ಮತ್ತು ತುಂಗಾ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಪಟ್ಟಣದ ಗಾಯಿತ್ರಿ ಮಂದಿರದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಪ್ರಭಾಮಂಡಲ ಹೊತ್ತಿಗೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ನ್ಯಾಯಾಂಗದ ಮೇಲೆ ವಿಶ್ವಾಸ ಉಳಿಯುವುದಕ್ಕೆ ವೈ.ಎ.ಪ್ರಭಾಕರ್ ಅವರ ನಿಷ್ಠುರವಾದ ವೃತ್ತಿ ಬದ್ಧತೆ ಅಗತ್ಯ. ಪಟ್ಟಣದ ಹಲವಾರು ಬ್ಯಾಂಕ್‌ಗಳಿಗೆ ಕಾನೂನು ಸಲಹೆಗಾರರಾಗಿದ್ದ ಅವರ ಶಿ-Áರಸ್ಸಿಗೆ ಚಕಾರ ಎತ್ತದೇ ಬ್ಯಾಂಕಿನವರು ಸಾಲ ನೀಡುತ್ತಿದ್ದರು. ಕಿರಿಯ ವಕೀಲರಿಗೆ ಮಾದರಿಯಾಗಿದ್ದ ಪ್ರಭಾಕರ್ ಅವರನ್ನು ಈ ಕೃತಿಯ ಮೂಲಕ ಬದುಕಿಸಲಾಗಿದೆ. ನ್ಯಾಯಾಂಗ ಕ್ಷೇತ್ರದಲ್ಲಿರುವವರಿಗೆ ಈ ಕೃತಿ ಮಾರ್ಗಸೂಚಿಯಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಯಾರಿಗೂ ಬುದ್ಧ, ಗಾಂಽಯಾಗಲು ಸಾಧ್ಯವಿಲ್ಲ. ವಕೀಲ ವೃತ್ತಿಯಲ್ಲಿ ಕೆಟ್ಟ ಕೆಲಸವನ್ನೂ ಮಾಡಬಹುದಾಗಿದೆ. ಆದರೆ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದು ಕಕ್ಷಿದಾರರ ಪ್ರೀತಿ, ವಿಶ್ವಾಸವನ್ನು ಗಳಿಸಿದ್ದ ವೈ.ಎ.ಪ್ರಭಾಕರ್ ಒಬ್ಬ ಸಾಮಾನ್ಯನಂತೆಯೇ ಬದುಕಿದ್ದರು. ಅವರ ಅಧ್ಯಯನಶೀಲತೆ, ಸಮಯಪಾಲನೆ ಮತ್ತು ವೃತ್ತಿ ಮೇಲಿನ ಬದ್ಧತೆ ಅನುಕರಣೀಯ ಎಂದರು.
ನಿವೃತ್ತ ನ್ಯಾಯಾಽÃಶ ಪ್ರಕಾಶ್ ನಾಡಿಗೇರ ಕೃತಿಯನ್ನು ಬಿಡುಗಡೆ ಮಾಡಿದರು. ಕೃತಿಯ ಕುರಿತಂತೆ ಪ್ರಧಾನ ಸಂಪಾದಕ ಪ್ರೊ. ಡಿ.ಎಸ್.ಸೋಮಶೇಖರ್ ಮಾತನಾಡಿದರು. ಡಾ. ಎಸ್.ಮನೋಹರ ರಾವ್, ನಿವೃತ್ತ ಜಿಲ್ಲಾಽಕಾರಿ ಪ್ರಭಾಕರ ಶರ್ಮಾ, ವಕೀಲರ ಸಂಘದ ಅಧ್ಯಕ್ಷ ಎಸ್.ವಿ.ಲೋಕೇಶ್, ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಹಾಬಲೇಶ್, ಬ್ರಾಹ್ಮಣರ ಸಂಘದ ಅಧ್ಯಕ್ಷ ತುಂಬ್ರಮನೆ ಚಂದ್ರಶೇಖರ್, ತೇಜಶ್ರೀ ಪ್ರಭಾಕರ್, ರಕ್ಷಿತ್ ಜೋಯ್ಸ್, ರವಿಕಿರಣ್ ಜೋಯ್ಸ್, ಡಾ. ಮುರುಳೀಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net