ಬೆದರಿಕೆಗೆ ಬೇಸತ್ತು ಆತ್ಮಹತ್ಯೆಗೆ ಯತ್ನ : ಪೊಲೀಸ್ ವೈಫಲ್ಯಕ್ಕೆ ಡಾ.ಭರತ್ ಶೆಟ್ಟಿ ಖಂಡನೆ

bharath shetty
Published on

ಗುರುಪುರ: ಸುರತ್ಕಲ್ ಇಡ್ಯಾದ ಹಿಂದು ಯುವತಿಯೊಬ್ಬಳಿಗೆ ಫೇಸ್ಬುಕ್ ಮೆಸೆಂಜರ್‌ನಲ್ಲಿ ಅಶ್ಲೀಲ ಮೆಸೇಜ್ ಮಾಡಿದಲ್ಲದೆ ತನ್ನೊಂದಿಗೆ ಬಾರದಿದ್ದರೆ 24 ತುಂಡು ಮಾಡಿ ಬಿಸಾಡುವೆ ಎಂದು ಬೆದರಿಕೆಯೊಡ್ಡಿರುವ ತಿಳಿಗೇಡಿಯ ವಿರುದ್ಧ ಕ್ಷಿಪ್ರ ಕ್ರಮ ಕೈಗೊಳ್ಳುವಲ್ಲಿ ವಿಫಲಗೊಂಡಿರುವ ಪೊಲೀಸ್ ವ್ಯವಸ್ಥೆ ವಿರುದ್ಧ ಶಾಸಕ ಡಾ.ಭರತ್ ಶೆಟ್ಟಿ ಪೊಲೀಸ್ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುವಕನ ಬೆದರಿಕೆ ಕರೆಗೆ ಬೇಸತ್ತ ಯುವತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಆಕೆಯ ಕುಟುಂಬಿಕರು ದೂರು ನೀಡಿದ್ದರೂ ಈ ಬಗ್ಗೆ ಪೊಲೀಸರು ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದರು.

ಸದ್ಯ ಯುವತಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದು, ಪೊಲೀಸರೇ ಇದರ ಜವಾಬ್ದಾರಿ ಹೊರಬೇಕು. ಇದರ ಹಿಂದೆ ಜಿಹಾದಿ ಸಂಚಿರುವ ಸಂದೇಹವಿದೆ. ಹಿಂದು ಕಾರ್ಯಕರ್ತರು ಸಹನೆ ಕಳೆದುಕೊಳ್ಳುವ ಮುನ್ನ ಜಿಲ್ಲಾಡಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಬೇಕು ಎಂದು ಡಾ.ಭರತ್ ಶೆಟ್ಟಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net