ಟೆಲಿ-ಐಸಿಯು ಘಟಕ ಕಾರ್ಯಾರಂಭ

ICU
Published on

ನರಗುಂದ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಟೆಲಿ-ಐಸಿಯು ಘಟಕ ಕಾರ್ಯಾರಂಭಿಸಿದ್ದು, ರೋಗಿಗಳು ನಿಟ್ಟುಸಿರು ಬಿಡುವಂತಾಗಿದೆ.

ಪಟ್ಟಣದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕಾಸ್ಪತ್ರೆಯಲ್ಲಿ 2022ರಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಘಟಕ ಸ್ಥಾಪಿಸಲಾಗಿದೆ. ಆದರೆ, ಘಟಕ ಉದ್ಘಾಟಿಸಿ 2 ವರ್ಷ ಗತಿಸಿದರೂ ಸೇವೆ ಮಾತ್ರ ಆರಂಭಗೊಂಡಿರಲಿಲ್ಲ. ಪ್ರತ್ಯೇಕ ವಿದ್ಯುತ್ ಟಿಸಿ ಅಳವಡಿಸುವುದು, ತಜ್ಞ ವೈದ್ಯರ ನೇಮಕಾತಿ ಸಮಸ್ಯೆಯಿಂದ ಕೇಂದ್ರಕ್ಕೆ ಸಂಪೂರ್ಣ ಬೀಗ ಜಡಿಯಲಾಗಿತ್ತು. ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ವೈದ್ಯಕೀಯ ಉಪಕರಣ ಧೂಳು ಹಿಡಿದಿದ್ದವು.

ಈ ಕುರಿತು ವಿಜಯವಾಣಿ ದಿನಪತ್ರಿಕೆಯಲ್ಲಿ ‘ಟೆಲಿ ಐಸಿಯು ಘಟಕಕ್ಕೆ ಬೀಗ’ ಶೀರ್ಷಿಕೆಯಡಿ ಜೂನ್ ತಿಂಗಳಲ್ಲಿ ವಿಸõತ ವರದಿ ಪ್ರಕಟಿಸಲಾಗಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ, ಜನಪ್ರತಿನಿಧಿಗಳು ನೂತನ ಐಸಿಯು ಘಟಕಕ್ಕೆ ಪ್ರತ್ಯೇಕ ಟಿಸಿ, ಜನರೇಟರ್ ಅಳವಡಿಸಲಾಗಿದೆ. ಜತೆಗೆ ದಿನದ 24 ಗಂಟೆ ಕರ್ತವ್ಯ ನಿರ್ವಹಿಸಲು ಒಬ್ಬ ತಜ್ಞ ವೈದ್ಯ, ಮೂವರು ಸ್ಟಾಫ್ ನರ್ಸ್​ಗಳನ್ನು ನೇಮಕಗೊಳಿಸಿ ಶನಿವಾರದಿಂದ ಚಿಕಿತ್ಸೆ ಆರಂಭಿಸಲಾಗಿದೆ.

ಆನ್​ಲೈನ್ ಮುಖಾಂತರ ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆ ಸೆಂಟ್ರಲ್ ಕೋ-ಆರ್ಡಿನೇಟರ್ ನುರಿತ ತಜ್ಞ ವೈದ್ಯರಿಂದ ಸಲಹೆ ಪಡೆದು ಚಿಕಿತ್ಸೆ ನೀಡಲಾಗುತ್ತದೆ. ವಿಜಯವಾಣಿ ಕಾರ್ಯಕ್ಕೆ ನಾಗರಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ತುರ್ತು ರೋಗಿಗಳ ಸಂಖ್ಯೆಗನುಗುಣವಾಗಿ ಮುಂಬರುವ ದಿನಗಳಲ್ಲಿ ಇಬ್ಬರು ವೈದ್ಯರು, ಮೂವರು ಸ್ಟಾಫ್ ನರ್ಸ್ ನೇಮಕಾತಿ ಮಾಡಿಕೊಳ್ಳಲಾಗುವುದು. | ಡಾ.ಜಗದೀಶ, ಟಿಲಿ ಐಸಿಯು ಕೇಂದ್ರದ ವೈದ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net