

ಶಶಿಧರ ಪಾಟೀಲ ಕೋ.ಶಿವಾಪುರ
ಸಮೀಪದ ಕೋಟೂರ ಗ್ರಾಮದಲ್ಲಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸಿದ್ಧಗೊಂಡು ಎರಡು ತಿಂಗಳು ಕಳೆದರೂ ಈವರೆಗೆ ಕಾರ್ಯ ಆರಂಭಿಸಿಲ್ಲ. ಇದರಿಂದ ಗ್ರಾಮದ ಜನರು ತೀವ್ರ ವಿದ್ಯುತ್ ಸಮಸ್ಯೆ ಎದುರಿಸುವಂತಾಗಿದೆ.
ಈ ಕೇಂದ್ರದಿಂದ ಸುಮಾರು 23 ಗ್ರಾಮಗಳಿಗೆ ವಿದ್ಯುತ್ ಸರಬರಾಜಾಗುತ್ತದೆ. ಆದರೆ, ಪದೇ ಪದೆ ವಿದ್ಯುತ್ ವ್ಯತ್ಯಯವಾಗುವುದರಿಂದ ವಿದ್ಯುತ್ ಆಧಾರಿತ ಕೆಲಸಗಳು ಹಾಗೂ ಹೊಲಗಳಿಗೆ ನೀರು ಹಾಯಿಸುವ ರೈತರ ಪಂಪ್ಸೆಟ್ಗಳಿಗೆ ಬಹಳಷ್ಟು ತೊಂದರೆಯಾಗಿದೆ. ಈ ಬಗ್ಗೆ ರೈತರು ಅನೇಕ ಬಾರಿ ಮನವಿ ಸಲ್ಲಿಸಿ, ಹೋರಾಟ ಕೈಗೊಂಡರೂ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ತಲೆ ಕೆಡಿಸಿಕೊಂಡಿಲ್ಲ.
ಈಗಾಗಲೇ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಕಾಮಗಾರಿ ಪೂರ್ಣಗೊಂಡಿದೆ ಎನ್ನುತ್ತಾರೆ ಗುತ್ತಿಗೆದಾರರು. ಆದರೆ, ಕಂಬ ನಿಲ್ಲಿಸಿ ತಂತಿ ಜೋಡಣೆ ಮಾಡುವ ಮೂಲಕ ಶ್ರೀದಲ್ಲೇ ಕೆಲಸ ಆರಂಭವಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ಭರವಸೆ ನೀಡುತ್ತಿದ್ದರೂ ಇದುವರೆಗೂ ಕೆಲಸ ಮಾತ್ರ ಆಗುತ್ತಿಲ್ಲ.
ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಿಸಿ ಶ್ರೀವೇ 110 ಕೆವಿ ವಿದ್ಯುತ್ ವಿತರಣಾ ಕೇಂದ್ರ ಕಾರ್ಯ ಪ್ರಾರಂಭಿಸಿ ಅನುಕೂಲ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.