ಕೆಸರುಮಯ ರಸ್ತೆ ದುರಸ್ಥಿಗೊಳಿಸಲು ಆಯುಕ್ತರಿಗೆ ಒತ್ತಾಯ

10 ckm 3
ಚಿಕ್ಕಮಗಳೂರು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಅವರಿಗೆ ಮನವಿ ಸಲ್ಲಿಸಿದ ಕೋಟೆ ನಿವಾಸಿಗಳು ಹದಗೆಟ್ಟಿರುವ ರಸ್ತೆ ದುರಸ್ಥಿಗೊಳಿಸಿಕೊಡಬೇಕು ಎಂದು ಒತ್ತಾಯಿಸಿದರು. ಜೀವನ್ ರಂಗನಾಥ್, ನಟರಾಜ್, ರಾಘವೇಂದ್ರ, ಶ್ಯಾಮು, ಪುನೀತ್, ಕುಮಾರ್, ಪವಾನಿ, ಸಿದ್ದಾರ್ಥ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಪ್ರತಿನಿತ್ಯ ಸಂಚರಿಸುವ ನಗರಸಭೆ ವ್ಯಾಪ್ತಿಯ ಕೋಟೆ ಸಮೀಪದ ರಸ್ತೆಯು ಸಾರ್ವಜನಿಕ ರಸ್ತೆಯು ತೀವ್ರ ಕೆಸರುಮಯ ವಾದ ಹಿನ್ನೆಲೆಯಲ್ಲಿ ಕೂಡಲೇ ದುರಸ್ಥಿಗೊಳಿಸಬೇಕು ಎಂದು ಬಿಜೆಪಿ ನಗರ ಯುವಮೋರ್ಚಾ ಕಾರ್ಯಕರ್ತರು ಹಾಗೂ ಸಾರ್ವಜನಿಕರು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಬಿಜೆಪಿ ನಗರ ಯುವಮೋರ್ಚಾ ಅಧ್ಯಕ್ಷ, ಜೀವನ್ ರಂಗನಾಥ್ ಮಾತನಾಡಿ, ವಿಪರೀತ ಮಳೆಯಿಂದಾಗಿ ಕೋಟೆ ಸಮೀಪದ ವಾಟರ್ ಟ್ಯಾಂಕ್ ಹತ್ತಿರ ರಸ್ತೆಯು ಕೆಸರುಮಯವಾಗಿ ಶಾಲಾ ಮಕ್ಕಳು, ವೃದ್ದರು ಸಂಚರಿಸದAಥ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ನಗರದ ವಾಟರ್‌ಟ್ಯಾಂಕ್ ಹತ್ತಿರ ಚಿಕ್ಕಮಗಳೂರು-ಸಕಲೇಶಪುರ ಮಾರ್ಗವಾಗಿ ನಿರ್ಮಿಸುತ್ತಿರುವ ರೈಲ್ವೆ ಕಾಮಗಾರಿ ಕಾರಣಕ್ಕೆ ಸಂಪೂರ್ಣವಾಗಿ ರಸ್ತೆಯನ್ನು ಅಗೆದಿರುವ ಕಾರಣ ರಸ್ತೆಯು ಅತಿಯಾದ ಮಳೆಯಿಂದಾಗಿ ಕೆಸರುಮಯವಾಗಿದೆ. ಈ ಮಾರ್ಗದಲ್ಲಿ ಸುಮಾರು ೨೫೦ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಇದೇ ಮಾರ್ಗವಾಗಿ ಸಂಚರಿಸಬೇಕಾಗಿದೆ. ಸಣ್ಣ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರೀಕರು ಹೆಚ್ಚಿರುವ ಈ ರಸ್ತೆಯಲ್ಲಿ ಸಂಚರಿಸುವ ವೇಳೆ ಕೆಸರಿನಲ್ಲಿ ಬೀಳುವ ಆತಂಕ ಉಂಟಾಗಿದೆ ಎಂದು ಹೇಳಿದರು.
ಕೂಡಲೇ ನಗರಸಭೆ ಆಯುಕ್ತರು ಸಾರ್ವಜನಿಕರು ಸಂಚರಿಸುವ ಈ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ಥಿಗೊಳಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಅವಘಡಗಳು ಸಂಭವಿಸಿದರೆ ತಾವೇ ಹೊಣೆಯಾಗಬೇಕು ಎಂದು ತಿಳಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕೋಟೆ ನಿವಾಸಿಗಳಾದ ಕೋಟೆ ಗ್ರಾಮಸ್ಥರ ನಟರಾಜ್, ರಾಘವೇಂದ್ರ, ಶ್ಯಾಮು, ಪುನೀತ್, ಕುಮಾರ್, ಪವಾನಿ, ಸಿದ್ದಾರ್ಥ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net