

ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ನಗರದ ಹೆಬ್ಬಳ್ಳಿ ಅಗಸಿಯ ಸಾರ್ವಜನಿಕ ಗಣೇಶ ಮೂರ್ತಿ ಇದ್ದ ಟ್ರ‍್ಯಾಕ್ಟರ್ ಚಲಾಯಿಸಿ ಗಮನ ಸೆಳೆದರು. 13ನೇ ದಿನವಾದ ಗುರುವಾರ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಿತು. ನಗರದಲ್ಲಿ ಮಧ್ಯಾಹ್ನ ಸಂಚರಿಸಿದ ಆಯುಕ್ತರು ಹೆಬ್ಬಳ್ಳಿ ಅಗಸಿಗೆ ಭೇಟಿ ನೀಡಿದ್ದರು. ಈ ವೇಳೆ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಗುತ್ತಿತ್ತು. ಟ್ರ‍್ಯಾಕ್ಟರ್ ಏರಿದ ಆಯುಕ್ತ ಮೆರವಣಿಗೆಗೆ ಚಾಲನೆ ನೀಡಿದರು.