ಪೊಲೀಸ್ ಆಯುಕ್ತರ ಸಿಟಿ ರೌಂಡ್ಸ್

5 Dwd 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ಸೋಮವಾರ ಸಂಜೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಚರಿಸಿ ಸಾರ್ವಜನಿಕರು ಅಹವಾಲು ಆಲಿಸಿದರು.
ಸಂಗಮ ವೃತ್ತ, ಲೈನ್ ಬಜಾರ್, ಭೂಸಪ್ಪ ಚೌಕ್, ಮದಾರಮಡ್ಡಿ, ವನಿತಾ ಸೇವಾ ಸಮಾಜ, ಸುಣ್ಣದ ಭಟ್ಟಿ, ಚರಂತಿಮಠ ಗಾರ್ಡನ್ ಹಾಗೂ ಇತರ ಪ್ರದೇಶಗಳಲ್ಲಿ ಸಂಚರಿಸಿದರು.
ಈ ವೇಳೆ ಮಾತನಾಡಿದ ಅವರು, ಸಾರ್ವಜನಿಕರೊಂದಿಗೆ ಪೊಲೀಸರು ಸದಾ ಇರುತ್ತೇವೆ. ಅಪರಾಧ, ಕಾನೂನುಬಾಹಿರ ಚಟುವಟಿಕೆ ತಡೆ ಹಾಗೂ ಸಮಾಜಘಾತುಕರ ವಿರುದ್ಧ ಸಾರ್ವಜನಿಕರು ಮುಕ್ತವಾಗಿ ಪೊಲೀಸರೊಂದಿಗೆ ಕೈ ಜೋಡಿಸಬೇಕು ಎಂದರು. ಆಯುಕ್ತರ ನಡೆ ಮೆಚ್ಚಿ ಸಾರ್ವಜನಿಕರು ಸನ್ಮಾನಿಸಲು ಶಾಲು, ಹೂಮಾಲೆ ತಂದಿದ್ದರು. ಕೆಲವರು ಸಿಹಿ ತಿನ್ನಿಸಿ ಪೊಲೀಸ್ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್., ಶಹರ ಠಾಣೆ ಇನ್‌ಸ್ಪೆಕ್ಟರ್ ಎನ್.ಸಿ. ಕಾಡದೇವರ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net