ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಸಿಕ್ಕಿಬಿದ್ದ ನಗರಸಭೆ ಆಯುಕ್ತ

Poojar
Published on

ಹಾವೇರಿ: ರಾಜ್ಯಾದ್ಯಂತ ಎಸಿಬಿ ದಾಳಿಗೆ ಭ್ರಷ್ಟ ಅಧಿಕಾರಿ-ಸಿಬ್ಬಂದಿ ಸಿಕ್ಕಿಹಾಕಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂದು ನಡೆದ ದಾಳಿಯೊಂದರಲ್ಲಿ ಲಂಚ ಪಡೆಯುತ್ತಿದ್ದ ನಗರ ಸಭೆ ಆಯುಕ್ತರೇ ಸಿಕ್ಕಿ ಹಾಕಿಕೊಂಡಿದ್ದಾರೆ.

ಹಾವೇರಿ ನಗರ ಸಭೆ ಆಯುಕ್ತ ಎಂ.ವಿ. ಪೂಜಾರ್ ಎಸಿಬಿ ದಾಳಿಯಲ್ಲಿ ಸಿಕ್ಕಿಬಿದ್ದ ಆರೋಪಿ. ಇವರು ಗುತ್ತಿಗೆದಾರರೊಬ್ಬರಿಂದು ಹಣ ಪಡೆಯುತ್ತಿರುವಾಗಲೇ ಸಿಕ್ಕಿಬಿದ್ದಿದ್ದಾರೆ. ಎಸಿಬಿ ಡಿವೈಎಸ್ಪಿ ಗೋಪಿ ನೇತೃತ್ವದಲ್ಲಿ ಈ ದಾಳಿ ನಡೆದಿತ್ತು.

ಗುತ್ತಿಗೆದಾರರೊಬ್ಬರ ಬಿಲ್ ಪಾಸ್ ಮಾಡಲು ಕಮಿಷನರ್​ ಪೂಜಾರ್​ 50 ಸಾವಿರ ರೂ. ಲಂಚ ಕೇಳಿದ್ದರು. ಬಳಿಕ 15,000 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net