12.50 ಲಕ್ಷ ಪರಿಹಾರ ನೀಡಲು ಆಯೋಗ ಆದೇಶ

Consumar court
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ
Published on

ಶಿವಮೊಗ್ಗ: ಕಾಯಿಲೆ ಮುಚ್ಚಿಚ್ಚು ಪಾಲಿಸಿ ಮಾಡಿಸಲಾಗಿದೆ ಎಂಬ ನೆಪವೊಡ್ಡಿ ಮೃತನ ಸಹೋದರಿಗೆ ವಿಮಾ ಪರಿಹಾರ ನೀಡಲು ನಿರಾಕರಿಸಿದ್ದ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 12.50 ಲಕ್ಷ ರೂ. ನೀಡುವಂತೆ ಆದೇಶಿಸಿದೆ.

ಭಾಗ್ಯ ಮತ್ತ ನಾಗರಾಜ ಎಂಬುವರು ಎಲ್‌ಐಸಿ ಇಂಡಿಯಾ ವಿರುದ್ಧ ಸಹೋದರನಿಗೆ ದೊರಕಬೇಕಾದ ವಿಮಾ ಮೊತ್ತ ನೀಡದೇ ಸೇವಾನ್ಯೂನತೆ ಎಸಗಿರುವ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಶಿವು ಅವರು 1 ಲಕ್ಷ ರೂ. ನಂತೆ 10 ಪಾಲಿಸಿ ಮತ್ತು 2.50 ಲಕ್ಷ ರೂ. ನಂತೆ 1 ಪಾಲಿಸಿ(ಸಮ್ ಅಶ್ಯುರ್ಡ್‌) ಪಡೆದಿದ್ದರು. ದುರುದೃಷ್ಟವಶಾತ್ ಶಿವು ಹೃದಯಾಘಾತದಿಂದ ಮೃತಪಟ್ಟಿದ್ದರು. ಆದರೆ ವಿಮಾ ಕಂಪನಿಯವರು ಹಿಂದಿನ ಕಾಯಿಲೆ ಮರೆಮಾಚಿ ಪಾಲಿಸಿ ಪಡೆದ ನೆಪವೊಡ್ಡಿ ಕ್ಲೇಮ್ ಅನ್ನು ತಿರಸ್ಕರಿದ್ದವು.

ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು, ಪರಿಹಾರ ನೀಡುವಂತೆ ಆದೇಶಿಸಿದೆ. ಜತೆಗೆ ಆದೇಶವಾದ ದಿನದಿಂದ 45 ದಿನದೊಳಗೆ 11 ಪಾಲಿಸಿಗಳ ಸಮ್ ಅಶ್ಯುರ್ಡ್‌ ಮೊತ್ತ ಮತ್ತು ಅದರೊಂದಿಗೆ ಬರುವ ಅಕ್ರೂಡ್ ಬೆನಿಫಿಟ್‌ಗೆ ಶೇ.9ರಂತೆ ಬಡ್ಡಿ ಸೇರಿಸಿ ಪಾವತಿಸಬೇಕು. ತಪ್ಪಿದಲ್ಲಿ ಆ ಮೊತ್ತಕ್ಕೆ ಶೇ.12ರಂತೆ ಬಡ್ಡಿಯನ್ನು ಪೂರ್ತಿ ಹಣ ಕೊಡುವವರೆಗೂ ನೀಡಬೇಕು. ಜತೆಗೆ ಮಾನಸಿಕ ಹಿಂಸೆಗಾಗಿ 30 ಸಾವಿರ ರೂ. ಮತ್ತು ವ್ಯಾಜ್ಯದ ಖರ್ಚಾಗಿ 10 ಸಾವಿರ ರೂ. ನೀಡುವಂತೆ ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net