ಸೇವಾನ್ಯೂನ್ಯತೆ, ಪರಿಹಾರ ನೀಡಲು ಆಯೋಗ ಆದೇಶ

Consumar court
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ
Published on

ಶಿವಮೊಗ್ಗ: ಉತ್ಪಾದನಾ ದೋಷವುಳ್ಳ ರೆಫ್ರಿಜಿರೇಟರ್ ಅನ್ನು ಪೂರೈಸಿದ್ದ ಕಂಪನಿಯ ಸೇವಾ ನ್ಯೂನ್ಯತೆ ಪರಿಗಣಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಶೇ.9ರ ಬಡ್ಡಿಯೊಂದಿಗೆ 30 ಸಾವಿರ ರೂ. ಅನ್ನು ಆದೇಶವಾದ 45 ದಿನದೊಳಗೆ ಗ್ರಾಹಕನಿಗೆ ನೀಡಬೇಕು ಎಂದು ಆದೇಶಿಸಿದೆ.

ಶಿವಮೊಗ್ಗದ ಎಸ್.ಕೆ.ಅನ್ಸರ್ ಖಾನ್ ಅವರು 2019ರಲ್ಲಿ ಕುವೆಂಪು ರಸ್ತೆಯ ಗೃಹೋಪಯೋಗಿ ಮಾರಾಟ ಮಳಿಗೆಯಲ್ಲಿ 10 ವರ್ಷ ವಾರೆಂಟಿಯೊಂದಿಗೆ 40 ಸಾವಿರ ರೂ. ಕೊಟ್ಟು ರೆಫ್ರಿಜಿರೇಟರ್ ಖರೀದಿ ಮಾಡಿದ್ದರು. ಆದರೆ 2023ರಲ್ಲಿ ರೆಫ್ರಿಜಿರೇಟರ್ ಹಾಳಾಗಿತ್ತು. ಸಂಸ್ಥೆಯ ಟೆಕ್ನಿಷಿಯನ್ ಮನೆಗೆ ಬಂದು ಪರಿಶೀಲಿಸಿ ಕಂಪ್ರೆಸರ್ ಹಾಳಾಗಿದೆ ಎಂದು ಹೊಸ ಕಂಪ್ರೆಸರ್ ಬದಲಾಯಿಸಿದ್ದರು. ಆದರೂ ಪುನಃ ಹಾಳಾಗಿತ್ತು. ದೂರು ನೀಡಿದರೂ ಸಂಸ್ಥೆಯವರು ರಿಪೇರಿ ಮಾಡಿಕೊಡದೆ ಹೊಸ ರೆಫ್ರಿಜಿರೇಟರ್ ತೆಗೆದುಕೊಳ್ಳುವಂತೆ ತಿಳಿಸಿದ್ದರು. ಈ ಬಗ್ಗೆ ಅನ್ಸರ್ ಖಾನ್ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.

ಅರ್ಜಿದಾರರ ಅಂಶಗಳು, ಪ್ರಮಾಣಪತ್ರ, ದಾಖಲೆ ಮತ್ತು ವಾದ ಆಲಿಸಿ ಸೇವಾನ್ಯೂನತೆ ಪರಿಗಣಿಸಿದ ಆಯೋಗದ ಅಧ್ಯಕ್ಷ ಟಿ. ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಅವರ ಪೀಠವು ಲೀಗಲ್ ನೋಟಿಸ್ ನೀಡಿದ ದಿನಾಂಕದಿಂದ ಈ ಆದೇಶವಾದ 45 ದಿನದೊಳಗೆ ಶೇ.9ರ ಬಡ್ಡಿಯೊಂದಿಗೆ 30 ಸಾವಿರ ರೂ. ಪಾವತಿಸಬೇಕು. ತಪ್ಪಿದಲ್ಲಿ ಆ ಮೊತ್ತಕ್ಕೆ ಶೇ.10ರಂತೆ ಬಡ್ಡಿ ಸೇರಿಸಿ ಈ ಆದೇಶವಾದ ದಿನದಿಂದ ಪೂರ್ಣ ಮೊತ್ತ ನೀಡುವವರೆಗೂ ಕೊಡಬೇಕೆಂದು ಹಾಗೂ ಮಾನಸಿಕ ಹಿಂಸೆಗಾಗಿ 25 ಸಾವಿರ ರೂ. ಮತ್ತು ವ್ಯಾಜ್ಯದ ಖರ್ಚು ವೆಚ್ಚದ ಬಾಬ್ತು 10 ಸಾವಿರ ರೂ. ನೀಡುವಂತೆ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net