ವಾಣಿಜ್ಯ ಮಳಿಗೆಗಳಿಂದ ಸೊಸೈಟಿಗೆ ಆದಾಯ

04-DVD-1
Published on

ದೇವದುರ್ಗ: ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ 33 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಐದು ವಾಣಿಜ್ಯ ಮಳಿಗೆಗಳನ್ನು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಇತ್ತೀಚೆಗೆ ಉದ್ಘಾಟಿಸಿದರು.

ವಾಣಿಜ್ಯ ಮಳಿಗೆಗಳಿಂದ ಸೊಸೈಟಿಗೆ ಆದಾಯ ಬರಲಿದ್ದು, ಹರಾಜು ಮೂಲಕ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗುವುದು. ಈಗಾಗಲೇ 150ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಒಂದರೆಡು ದಿನದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಮಳಿಗೆಗಳಿಂದ ತಿಂಗಳಿಗೆ ಬರುವ ಬಾಡಿಗೆ ಹಣ ಸದ್ಬಳಕೆ ಮಾಡಿಕೊಳ್ಳಬೇಕು. ಮಳಿಗೆಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಶರಣಗೌಡ ಕಮತಿಗಿ ಮಾತನಾಡಿ, ಮಳಿಗೆಗಳಿಂದ ಬರುವ ಆದಾಯದಿಂದ ಮತ್ತಷ್ಟು ಅಭಿವೃದ್ಧಿ ಮಾಡುವ ಸಂಕಲ್ಪ ಹೊಂದಲಾಗಿದೆ. ಹಂತ ಹಂತವಾಗಿ ಇನ್ನೂ ಮಳಿಗೆಗಳು ನಿರ್ಮಿಸುವ ಗುರಿ ಹೊಂದಿದ್ದೇವೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ಶರಣಗೌಡ ಗೌರಂಪೇಟೆ, ಪ್ರಮುಖರಾದ ಚನ್ನವೀರಯ್ಯಸ್ವಾಮಿ ಅರಕೇರಾ, ಬುಳ್ಳ ನಿಂಗಣ್ಣಗೌಡ, ಚಂದ್ರಶೇಖರ ಹೇರೂರು, ಸತೀಶ ಬಂಡೇಗುಡ್ಡ, ಮಲ್ಲಿಕಾರ್ಜನ ಪಾಟೀಲ್, ಲಿಂಗನಗೌಡ ಗಲಗ, ಸುರೇಶ ನಾಯಕ, ಪ್ರಕಾಶ ಪಾಟೀಲ್, ಮಲ್ಲನಗೌಡ ವಕೀಲ, ಬಸವರಾಜಪ್ಪ ಬಂಡೇಗುಡ್ಡ, ವ್ಯವಸ್ಥಾಪಕಿ ಸರಸ್ವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net