

ವಿರಾಜಪೇಟೆ:ಪುರಸಭೆ ವ್ಯಾಪ್ತಿಯಲ್ಲಿ ಬರುವ ಹಂದಿ ಮಾಂಸದ ಮಳಿಗೆ, ವಾಹನ ನಿಲುಗಡೆ ಶುಲ್ಕ ಮತ್ತು ಸಂತೆ ಶುಲ್ಕ ಸೇರಿದಂತೆ ವಿವಿಧ ಮಳಿಗೆಗಳ 2024-25ನೇ ಸಾಲಿನ ಹರಾಜು ಪ್ರಕ್ರಿಯೆಗಳು ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
2023-24ನೇ ಸಾಲಿನಲ್ಲಿ ಹಂದಿ ಮಾಂಸದ ಮಳಿಗೆ (3ನೇ ಮಳಿಗೆ)ಹರಾಜು ನಡೆದು 76 ಸಾವಿರ ರೂ., ವಾಹನ ಶುಲ್ಕ 92,100 ರೂ., ಸಂತೆ ಶುಲ್ಕ 1,60,600ರೂ.ಗಳಿಗೆ ಹರಾಜು ನಡೆದು ಒಟ್ಟು 3,28,700 ರೂ. ಪುರಸಭೆಗೆ ಸಂದಾಯವಾಗಿತ್ತು. ಇದೀಗ 2024-25ನೇ ಸಾಲಿಗೆ ಹಂದಿ ಮಾಂಸ ಮಾರಾಟ ಮಳಿಗೆ (3ನೇ ಮಳಿಗೆ ) 78,000 ರೂ., ವಾಹನ ಶುಲ್ಕ 1,60,000 ರೂ. ಮತ್ತು ಸಂತೆ ಶುಲ್ಕ 4,02,000 ರೂಗಳಿಗೆ ಹರಾಜು ನಡೆಯಿತು. ಪುರಸಭೆಗೆ ಒಟ್ಟು 6,40,000 ರೂ. ಹರಾಜಿನಿಂದ ಸಂಗ್ರಹವಾಗಿದೆ.
ಪುರಸಭೆ ಸದಸ್ಯರಾದ ಸುಭಾಷ್, ಸುನೀತಾ ಜೂನ, ರಜನಿಕಾಂತ್, ಅಬ್ದುಲ್ ಜಲೀಲ್, ತಬಸುಮ್, ಸಿಬ್ಬಂದಿ ಇದ್ದರು.