ಮೀನುಮರಿ ಉತ್ಪಾದನಾ ಕಾರ್ಯ ಆರಂಭ

goldfish
Published on

ಮೈಸೂರು ವಲಯದ ರಾಜ್ಯವಲಯ ವ್ಯಾಪ್ತಿಗೆ ಒಳಪಡುವ ಸರಗೂರು ತಾಲ್ಲೂಕಿನ ನುಗು ಮೀನುಮರಿ ಉತ್ಪದನಾ ಕೇಂದ್ರ ಮತ್ತು ಹೆಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಮೀನುಮರಿ ಉತ್ಪಾದನಾ ಕೇಂದ್ರಗಳಲ್ಲಿ 2023-24 ನೇ ಸಾಲಿನ ಮೀನುಮರಿ ಉತ್ಪಾದನಾ ಕಾರ್ಯ ಪ್ರಾರಂಭಿಸಿದ್ದು, ಈ ಕೇಂದ್ರಗಳಲ್ಲಿ ವಿವಿಧ ತಳಿಯ ಮೀನುಮರಿಗಳು ಮಾರಟಕ್ಕೆ ಲಭ್ಯವಿದೆ.

 ಮೈಸೂರು ವಲಯದ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಮೀನು ಕೃಷಿಕರು ಮತ್ತು ನೋಂದಾಯಿತ ಮೀನು ಮರಿ ಪಾಲನಾ ಕೇಂದ್ರಗಳ ಮಾಲೀಕರು ಮೀನುಮರಿಗಾಗಿ ಸಂಬOಧಿತ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ನುಗು ಮೀನುಮರಿ ಉತ್ಪಾದನಾ ಕೇಂದ್ರ, ಬೀರುವಾಳು ಸರಗೂರು ತಾಲ್ಲೂಕು ಮೀನುಗಾರಿಗೆ ಉಪನಿರ್ದೇಕರಾದ ಮಹಾದೇವ ಅವರ ದೂ.ಸಂ: 9986755434, ಕಬಿನಿ ಮೀನುಮರಿ ಉತ್ಪಾದನಾ ಕೇಂದ್ರ, ಬೀಚನಳ್ಳಿ ಹೆಚ್.ಡಿ. ಕೋಟೆ ತಾಲ್ಲೂಕು ಮೀನುಗಾರಿಗೆ ಉಪ ನಿರ್ದೇಶಕರಾದ ಶ್ರೀನಿವಾಸ್ ಡಿ.ಎಸ್ ಅವರ ದೂ.ಸಂ: 9741929175 ಅನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net