ಜೂ.17 ಮತ್ತು 18ರಂದು ಸಂಗೀತ ಸಮ್ಮೇಳನ

ಜೂ.17 ಮತ್ತು 18ರಂದು ಸಂಗೀತ ಸಮ್ಮೇಳನ
Published on

ರಾಯಚೂರು: ಪಂ.ಪುಟ್ಟರಾಜ ಗವಾಯಿ ಪುಣ್ಯಸ್ಮರಣೆ ನಿಮಿತ್ತ ಜೂ.17 ಮತ್ತು 18ರಂದು ಎರಡು ದಿನ ನಗರದ ಸೋಮವಾರಪೇಟೆ ಹಿರೇಮಠದಲ್ಲಿ ಸಂಗೀತ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಪಂ.ಪುಟ್ಟರಾಜ ಸಾಂಸ್ಕೃತಿಕ ಟ್ರಸ್ಟ್ ಖಜಾಂಚಿ ಪಿ.ಚಿನ್ನಯ್ಯಸ್ವಾಮಿ ತಿಳಿಸಿದರು.

ನಗರದ ಪತ್ರಿಕಾಭವನದ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು. ಟ್ರಸ್ಟ್‌ನಿಂದ ಪ್ರತಿವರ್ಷ ಸಂಗೀತ ಸಮ್ಮೇಳನ ಆಯೋಜಿಸಲಾಗುತ್ತಿದೆ. ಈ ಬಾರಿ ಸ್ಥಳೀಯ ಕಲಾವಿದರಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಎರಡು ದಿನ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

17ರಂದು ನಡೆಯುವ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವನ್ನು ವಹಿಸಲಿದ್ದಾರೆ. ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಶಾಸಕ ಡಾ.ಶಿವರಾಜ ಪಾಟೀಲ್, ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಹಟ್ಟಿ ಚಿನ್ನದ ಗಣಿ ಮಾಜಿ ಅಧ್ಯಕ್ಷ ಎನ್.ಗಿರಿಜಾಶಂಕರ, ವರ್ತಕ ಇಲ್ಲೂರು ಅನಂತಗೋಪಾಲಯ್ಯ ಶೆಟ್ಟಿ ಭಾಗವಹಿಸಲಿದ್ದಾರೆ ಎಂದರು.

ಮೀರಜ್‌ನ ಸದಾಶಿವ ಮೂಳೆಯಿಂದ ಶಹನಾಯಿ ವಾದನ

ಮೀರಜ್‌ನ ಸದಾಶಿವ ಮೂಳೆಯಿಂದ ಶಹನಾಯಿ ವಾದನ, ಹೈದರಾಬಾದ್‌ನ ಶ್ರೀನಿವಾಸರಿಂದ ಹಿಂದುಸ್ತಾನಿ ಗಾಯನ, ತಾಳಿಕೋಟೆಯ ದೀಪಕ್ ಸಿಂಗ್ ಹವಾರೆಯಿಂದ ಹಾರ್ಮೋನಿಯಂ, ಕಲಬುರ್ಗಿಯ ಪಂಚಾಕ್ಷರಿ ಕಣವಿಯಿಂದ ತಬಲಾ ವಾದನ ನಡೆಸಿಕೊಡಲಿದ್ದಾರೆ ಎಂದು ಹೇಳಿದರು.
18 ರಂದು ನಡೆಯುವ ಕಾರ್ಯಕ್ರಮದಲ್ಲಿ ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್, ಜಿ.ಪಂ. ಮಾಜಿ ಸದಸ್ಯ ಮಹಾಂತೇಶ ಪಾಟೀಲ್ ಅತ್ತನೂರು, ಮುಖಂಡರಾದ ಪಿ.ರಾಜೇಂದ್ರರೆಡ್ಡಿ, ರಾಮನಗೌಡ ಏಗನೂರು, ಬಿ.ಬಸವರಾಜ, ರಾಮಚಂದ್ರ ಕರ್ಲಿ, ಬಂಡೇಶ ವ್ಲಕಂದಿನ್ನಿ ಾಗವಹಿಸಲಿದ್ದಾರೆ. ಕಲಬುರ್ಗಿಯ ಡಾ.ಜಯದೇವಿ ಜಂಗಮಶೆಟ್ಟಿಯಿಂದ ಹಿಂದುಸ್ತಾನಿ ಗಾಯನ, ಪಂಚಾಕ್ಷರಿ ಕಣವಿಯಿಂದ ತಬಲಾ ವಾದನ, ಗದಗನ ಪಂ.ವೆಂಕಟೇಶ ಆಲ್ಕೋಡರಿಂದ ಹಿಂದುಸ್ಥಾನಿ ಗಾಯನ, ತಾಳಿಕೋಟೆಯ ದೀಪಕ್ ಸಿಂಗ್ ಹಜಾರೆಯಿಂದ ಹಾರ್ಮೋನಿಯಂ ಹಾಗೂ ಸ್ಥಳೀಯ ಕಲಾವಿದರಿಂದ ಗಾಯನವನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಪಿ.ಚಿನ್ನಯ್ಯಸ್ವಾಮಿ ತಿಳಿಸಿದರು.


ಟ್ರಸ್ಟ್ ಅಧ್ಯಕ್ಷ ಈರಣ್ಣ ಹೂಗಾರ, ಗೌರವಾಧ್ಯಕ್ಷ ರಘುಪತಿ ಪೂಜಾರ ದಿನ್ನಿ, ಪದಾಧಿಕಾರಿಗಳಾದ ಎ.ಎಸ್.ರಘುಕುಮಾರ, ಬಸವರಾಜ ಕೊತ್ತದೊಡ್ಡಿ, ರಂಗಸ್ವಾಮಿ, ವಿಜಯಕುಮಾರ ದಿನ್ನಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net