

ಧಾರವಾಡ: ನಗರದ ಗಜಾನನ ಮಹಾಲೆ ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಗಜಾನನ ಮಹಾಲೆ ಅವರ 7ನೇ ಪುಣ್ಯಸ್ಮರಣೆ ಸಮಾರಂಭವನ್ನು ಅ. 21ರಂದು ಸಂಜೆ 5.30ಕ್ಕೆ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಲಾಗಿದೆ.
ನಾಟಕಕಾರ ಝಾಕೀರ ನಧಾಫ್ ಅತಿಥಿಯಾಗಿ ಆಗಮಿಸುವರು. ಚಿತ್ರ ಕಲಾವಿದ ಬಿ. ಮಾರುತಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರತಿಷ್ಠಾನದ ಉಪಾಧ್ಯಕ್ಷ ಶಂಕರ ಕುಂಬಿ, ಮಹಾಲೆ ಕುಟುಂಬಸ್ಥರು ಉಪಸ್ಥಿತರಿರುವರು. ಬಳಿಕ ವಿದುಷಿ ಸವಿತಾ ಹೆಗಡೆ ನೇತೃತ್ವದಲ್ಲಿ ಕಲಾರ್ಪಣ ನೃತ್ಯ ಅಕಾಡಮಿ ತಂಡದಿಂದ ನೃತ್ಯ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.