ಯಲ್ಲಾಲಿಂಗ ಮಹಾಪ್ರಭುಗಳ ಪುಣ್ಯಸ್ಮರಣೆ

27MGKD1
Published on

ಮುಗಳಖೋಡ: ಪಟ್ಟಣದ ಯಲ್ಲಾಲಿಂಗ ಮಹಾರಾಜರ ಬಹನ್ಮಠದಲ್ಲಿ ಯಲ್ಲಾಲಿಂಗ ಮಹಾಪ್ರಭುಗಳ 39ನೇ ಪುಣ್ಯಸ್ಮರಣೋತ್ಸವ ಸಮಾರಂಭ ಸಂಭ್ರಮದಿಂದ ಜರುಗಿತು.

ಶ್ರೀಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರೀಸದ್ಗುರು ಯಲ್ಲಾಲಿಂಗ ಮಹಾಪ್ರಭುಗಳ ಗದ್ದುಗೆ ಮೇಲೆ ಪುಷ್ಪವೃಷ್ಟಿಯನ್ನು ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ನೆರವೇರಿಸಿದರು. ನಂತರ ಬ್ರಹ್ಮ ವೇದಿಕೆಗೆ ಆಗಮಿಸಿ ಪೂಜ್ಯರ ಸಿಂಹಾಸನಾರೋಹಣ, ಪಾದಪೂಜೆ, ಸುವರ್ಣ ಕಿರೀಟ ಧಾರಣೆ ಕಾರ್ಯಕ್ರಮ ಜರುಗಿದವು. ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಗಮಿಸಿ ಶ್ರೀಗಳ ದರ್ಶನ ಆಶೀರ್ವಾದ ಪಡೆದುಕೊಂಡರು.

ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸದ್ಗುರುಗಳಿಗೆ ತನಾರುತಿ ಸಮರ್ಪಿಸಿದರು. ವರ್ಡ್ ಬುಕ್ ಆ್ ರೆಕಾರ್ಡ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ವತಿಯಿಂದ ಶ್ರೀಗಳಿಗೆ ವಿಶ್ವದಾಖಲೆ ಪ್ರಮಾಣ ಪತ್ರ ಹಾಗೂ ಪದಕ ಶಾಸಕ ಮಹೇಶ ತಮ್ಮಣ್ಣವರ ವಿಶ್ವ ದಾಖಲೆ ಸಂಸ್ಥೆಯ ಮುಖ್ಯಸ್ಥರ ಪರವಾಗಿ ಸಮರ್ಪಿಸಿದರು. ಮುಂಬೈ ಭಕ್ತರು ಶ್ರೀಗಳಿಗೆ ಬೆಳ್ಳಿ ಕಿರೀಟ ಸಮರ್ಪಿಸಿದರು. ಕರ್ನಾಟಕ, ಮಹಾರಾಷ್ಟ್ರ, ಗೋವಾ, ತೆಲಂಗಾಣ, ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಆಶೀರ್ವಚನ ನೀಡಿದರು. ಅಪ್ಪಾಜಿ ಕಲಾ ಬಳಗದಿಂದ ಸಂಗೀತ ಸೇವೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net