ವಿದ್ವಾನ್ ಎಂ.ಆರ್.ರಾಜಪ್ಪ ಅವರ ಪುಣ್ಯ ಸಂಸ್ಮರಣೋತ್ಸವ

Published on

ಮೈಸೂರು: ಅರಮನೆ ಆಸ್ಥಾನ ಮೃದಂಗ ವಿದ್ವಾನ್ ಎಂ.ಆರ್.ರಾಜಪ್ಪ ಅವರ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ಸೆ.9ರಂದು ಸಂಗೀತೋತ್ಸವ ಆಯೋಜಿಸಲಾಗಿದೆ ಎಂದು ರಾಜಪ್ಪ ಪುತ್ರ ಡಾ.ಎಂ.ಆರ್.ಹನುಮಂತರಾಜು ತಿಳಿಸಿದರು.

ಕಲಾಮಂದಿರದಲ್ಲಿ ಅಂದು ಸಂಜೆ 4.30ಕ್ಕೆ ಆಯೋಜಿಸಿರುವ ಕಾರ್ಯಕ್ರಮವನ್ನು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಉದ್ಘಾಟಿಸುವರು. ಹೊರನಾಡು ದೇವಸ್ಥಾನದ ಸಂಸ್ಥಾಪಕರಾದ ಶ್ರೀಭೀಮೇಶ್ವರ ಜೋಷಿ, ರಾಜಮ್ಮ, ಉದ್ಯಮಿ ಜಗನ್ನಾಥ್ ಶೆಣೈ, ಲಹರಿ ಕಂಪನಿಯ ವೇಲು, ವಿಜ್ಞಾನಿ ಪ್ರೊ.ಎಸ್.ರಾಮಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಆಗಮಿಸುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿದುಷಿ ಡಾ.ಕೃಪಾ ಫಡ್ಕೆ ಅವರ ಶಿಷ್ಯವೃಂದದಿಂದ ನೃತ್ಯೋತ್ಸವ, ಸರಸ್ವತಿ ವಾದ್ಯವೃಂದದಿಂದ ಲಯನಾದ ತರಂಗ ಸಂಗೀತ ಕಾರ್ಯಕ್ರಮ, ನಾಗನಂದಿನಿ ತೆಂಕುತಿಟ್ಟು ಯಕ್ಷಗಾನ ಕಾರ್ಯಕ್ರಮ ಇರಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net