ಉಮಾಪತಿ ಶಿವಾಚಾರ್ಯರ ಪುಣ್ಯಸ್ಮರಣೆ ಇಂದು

19 GDJ 1
Published on

ಗಜೇಂದ್ರಗಡ: ತಾಲೂಕಿನ ಸೂಡಿ ಗ್ರಾಮದ ಶ್ರೀ ಉಮಾಪತಿ ಶಿವಾಚಾರ್ಯರ 76ನೇ ಪುಣ್ಯಸ್ಮರಣೆ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಪುರಾಣ ಮಹಾಮಂಗಲ, 47ನೇ ವರ್ಷದ ರಥೋತ್ಸವ ಹಾಗೂ 322ನೇ ಮಾಸಿಕ ಶಿವಾನುಭವ ಗೋಷ್ಠಿ ಅ.20ರಂದು ಶುಕ್ರವಾರ ಜರುಗಲಿದೆ.

ಶುಕ್ರವಾರ ಬೆಳಿಗ್ಗೆ 7ಗಂಟೆಗೆ ಜಂಗಮ ವಟುಗಳಿಗೆ ಅಯ್ಯಚಾರ ಹಾಗೂ ಭಕ್ತರಿಗೆ ಲಿಂಗಧಾರಣೆ ಜರುಗುವುದು, ಮಧ್ಯಾಹ್ನ 3 ಗಂಟೆಗೆ ಜನ ಜಾಗೃತಿ ಧರ್ಮ ಸಮಾರಂಭ ಹಾಗೂ 322ನೇ ಶಿವಾನುಭವ ಜರುಗುವುದು. ಇದರ ಸಾನ್ನಿಧ್ಯವನ್ನು ನರಸಾಪುರ ಮರುಳ ಸಿದ್ದಲಿಂಗ ಶಿವಾಚಾರ್ಯರು ವಹಿಸುವರು. ಯಲಬುರ್ಗಾ ಮುರಡಿ ಹಿರೇಮಠದ ಬಸವಲಿಂಗ ಶಿವಾಚಾರ್ಯರು, ಜಿಗೇರಿಯ ಗುರುಸಿದ್ಧೇಶ್ವರ ಶಿವಾಚಾರ್ಯರು ನೇತೃತ್ವ ವಹಿಸುವರು, ಅತಿಥಿಗಳಾಗಿ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಭಾಗವಹಿಸವರು. ಸಂಜೆ 5.30ಕ್ಕೆ ಮಹಾ ರಥೋತ್ಸವ ಜರುಗುವುದು ಎಂದು ಮಠಾಧ್ಯಕ್ಷರಾದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net