

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರದ ವಿಶ್ವೇಶ್ವರಪುರದಲ್ಲಿರುವ ಮಾಜಿ ಸಚಿವ ಅಂಜನಮೂರ್ತಿ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಥಮ ವರ್ಷದ ಪುಣ್ಯ ಸ್ಮರಣೆ ಮಾಡಲಾಯಿತು. ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಮಾಗಡಿ ಸೇರಿ ವಿವಿಧ ಕಡೆಯಿಂದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಇನ್ನಿತರ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪಕ್ಷಾತೀತವಾಗಿ ಆಗಮಿಸಿ ಗೌರವ ಸಮರ್ಪಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್‌ಚೌಧರಿ ಮಾತನಾಡಿ, ಮಾಜಿ ಸಚಿವ ಅಂಜನಮೂರ್ತಿ ಅವರು ಅಧಿಕಾರಾವಧಿಯಲ್ಲಿ ಬಡವರು, ಹಿಂದುಳಿದ ವರ್ಗಗಳ, ರೈತರ ಪರ ಜಾರಿಗೆ ತಂದ ಅನೇಕ ಯೋಜನೆಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ ಎಂದು ಬಣ್ಣಿಸಿದರು.
ಮುಖಂಡ ದೀಪಕ್‌ಕಿರಣ್ ಮಾತನಾಡಿ, ತಂದೆಯ ಹೋರಾಟ, ಹೆಜ್ಜೆಯ ಗುರುತು ಜೀವನದಲ್ಲಿ ಆದರ್ಶವಾಗಿದ್ದು, ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸುವ ಕಾರ್ಯ ಮಾಡುತ್ತಿದ್ದರು. ಮಧುರೆ ಹೋಬಳಿಯಲ್ಲಿ ತಂದೆಯ ಹೆಸರಿನಲ್ಲಿ ಅಭಿಮಾನಿಗಳು ಅಂಜಿನಮೂರ್ತಿ ನಗರ ನಿರ್ಮಾಣ ಮಾಡಿರುವುದು ಅವರ ಸಾಧನೆ ಏನೆಂಬುದನ್ನು ತೊರಿಸುತ್ತದೆ. ಅವರ ರಾಜಕೀಯ ಜೀವನ ನಮ್ಮಗೆ ಸದಾ ಸ್ಫೂರ್ತಿಯಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಿದ್ದರಾಮು, ರೋಟರಿ ನಿರ್ದೇಶಕ ಎಸ್.ಗಂಗರಾಜು, ವಕೀಲ ಯಲ್ಲಪ್ಪ, ಮುಖಂಡ ಸಪ್ತಗಿರಿ ಶಂಕರ್‌ನಾಯಕ್, ಅಜೇಯ್, ಮುನಿಯಪ್ಪ, ನಂದಕುಮಾರ್, ಮಹದೇವ್, ಪಿ.ಗಂಗಾಧರ್, ಅಂಜಿನಮೂರ್ತಿ, ಬೊಮ್ಮನಹಳ್ಳಿನಾಗರಾಜು, ಮರಿವೆಂಕಟಪ್ಪ, ಅರಣ್‌ಕುಮಾರ್, ರಾಮಣ್ಣ, ಮಾರುತಿ, ಜಯಂತ್, ಬೈಲಪ್ಪ, ಕೃಷ್ಣಮೂರ್ತಿ, ರಾಜು ಉಪಸ್ಥಿತರಿದರು.