

ಗುಳೇದಗುಡ್ಡ: ಮರಡಿ ಮಠದ 10ನೇ ಕಾಡಸಿದ್ಧೇಶ್ವರರ ಪುಣ್ಯಸ್ಮರಣೋತ್ಸವ, ಅಭಿನವ ಕಾಡಸಿದ್ಧೇಶ್ವರ ಶ್ರೀಗಳ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಹಾಗೂ ನೂತನ ರಥದ ಲೋಕಾರ್ಪಣೆ ಕಾರ್ಯಕ್ರಮವು ಏ.20 ರಿಂದ 27ರ ವರೆಗೆ ನಡೆಯಲಿದೆ ಎಂದು ಅಮರೇಶ್ವರ ಮಠದ ನೀಲಕಂಠ ಸ್ವಾಮಿಗಳು ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವಾರದವರೆಗೆ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನ, ತುಲಾಭಾರ, ಪ್ರಭಾತ ಯಾತ್ರೆ, ರಥೋತ್ಸವ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಏ.20ರಿಂದ 24ರವರೆಗೆ ಸಂಜೆ 7 ಗಂಟೆಗೆ ಕಮತಗಿಯ ಗಣೇಶ ಶಾಸಿಗಳಿಂದ ವಿವೇಕ ದರ್ಶನ ಪ್ರವಚನ ನಡೆಯಲಿದೆ. ಏ. 20ರಂದು ಸಂಜೆ 7ಗಂಟೆಗೆ ಬಿಲ್ ಕೆರೂರಿನ ಬಿಲ್ವಾಶ್ರಮದ ಸಿದ್ದಲಿಂಗ ಸ್ವಾಮಿಗಳು ಪ್ರವಚನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹೊಳೆಹುಚ್ಚೇಶ್ವರ ಮಠದ ಹುಚ್ಚೇಶ್ವರ ಸ್ವಾಮಿಗಳು, ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು, ಸಿದ್ದನಗೊಳ್ಳದ ಶಿವಕುಮಾರ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ವಿಪ ಸದಸ್ಯ ಪಿ.ಎಚ್. ಪೂಜಾರ, ಮಾಜಿ ಶಾಸಕ ರಾಜಶೇಖರ ಶೀಲವಂತ, ಮಹೇಶ ಬಿಜಾಪೂರ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ, ಸಂಜು ಕಾರಕೂನ, ಪಿ.ಎನ್. ಪವಾರ ಉಪಸ್ಥಿತರಿರಲಿದ್ದಾರೆ ಎಂದರು.
ಮಠದ ಅಭಿನವ ಕಾಡಸಿದ್ಧೇಶ್ವರ ಸ್ವಾಮಿಗಳು, ಸಂಗಪ್ಪ ಜವಳಿ, ಡಾ.ವಿ.ಎ. ಬೆನಕನಾಳ, ಎಸ್.ಐ.ರಾಜನಾಳ, ರವಿ ಗೌಡರ, ವಿಶ್ವನಾಥ ಹಿರೇಮಠ, ಮಲ್ಲಿಕಾರ್ಜುನ ಶೀಲವಂತ, ವೀರಣ್ಣ ಕುರಹಟ್ಟಿ, ಪ್ರಕಾಶ ಅಂಕದ, ಸಚಿನ ತೊಗರಿ, ಪ್ರಶಾಂತ ಜವಳಿ, ಭುವನೇಶ ಪೂಜಾರ, ಮುತ್ತಣ್ಣ ದೇವರಮನಿ, ಮಹೇಶ ಸೂಳಿಭಾವಿ, ಎಂ.ಎಸ್. ಹಿರೇಮಠ ಮತ್ತಿತರರಿದ್ದರು.